7:48 PM Friday4 - December 2020
ಬ್ರೇಕಿಂಗ್ ನ್ಯೂಸ್
ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ

ಇತ್ತೀಚಿನ ಸುದ್ದಿ

ಸಂತೋಷಕುಮಾರ‌ ಮೆಹಂದಳೆಯವರಿಗೆ ನರಸಮ್ಮ ಕೃಷ್ಣಮೂರ್ತಿ ಪ್ರಶಸ್ತಿ.

November 13, 2020, 2:01 AM

ಹುಬ್ಬಳ್ಳಿ Reporter Karnataka News: ಭಾವ ಸಂಗಮ‌ ಸಾಂಸ್ಕೃತಿಕ ವೇದಿಕೆ ಕೊಡಮಾಡುವ ನರಸಮ್ಮ ಕೃಷ್ಣಮೂರ್ತಿ ರಾಜ್ಯ ಮಟ್ಟದ ಕಥಾ‌ಸಾಹಿತ್ಯ ಪ್ರಶಸ್ತಿಯನ್ನು ಪ್ರಸಕ್ತ ಸಾಲಿಗೆ(2020) ಯುವ ಕಥೆಗಾರ ಸಂತೋಷ ಕುಮಾರ ಮೆಹಂದಳೆ ( ಕೈಗಾ) ಅವರ “ಒಳ ಹರಿವು” ಕಥೆ ಪಡೆದುಕೊಂಡಿದೆ.

ಪ್ರಶಸ್ತಿಯು ಮೂರು ಸಾವಿರ ರೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಭಾವಸಂಗಮ‌ ಸನ್ಮಾನವನ್ನು ಒಳಗೊಂಡಿರುತ್ತದೆ. 2021 ರಲ್ಲಿ ನಡೆಯುವ ಭಾವಸಂಗಮ 6 ನೆಯ ಸಮಾಗಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ‌.

ಸ್ಪರ್ಧೆಯಲ್ಲಿ ಡಾ.ಕೊಳ್ಚಪ್ಪೆ ಗೋವಿಂದ‌ಭಟ್‌ ( ಕಾಸರಗೋಡು), ಅವರ ಜೊಕಾಲಿ ಕಥೆ‌ ಎರಡನೇಯ ಸ್ಥಾನ ಮತ್ತು ಶ್ವೇತಾ ನರಗುಂದ ( ಬೆಳಗಾವಿ) ಅವರ ವಿಪ್ಲವ ಕಥೆ‌ ಮೂರನೆಯ ಸ್ಥಾನ ಪಡೆದುಕೊಂಡಿವೆ.

ಕೊಡಗು ಜಿಲ್ಲೆ ಕಾಂತಬೈಲುವಿನ ಸಹನಾ ಕಾಂತಬೈಲು, ಸಿದ್ದಾಪುರದ ಗೀತಾ ಹೆಗಡೆ ಮತ್ತು ಗಂಗೊಳ್ಳಿಯ ನರೇಂದ್ರ ಗಂಗೊಳ್ಳಿಯವರ ಕಥೆಗಳು ತೀರ್ಪುಗಾರರ ಮೆಚ್ಚುಗೆ
ಪಡೆದಿವೆ.

ದ್ವಿತೀಯ ಮತ್ತು ತೃತೀಯ ಬಹುಮಾನಿತರಿಗೆ ಕ್ರಮವಾಗಿ ಎರಡು ಸಾವಿರ ಮತ್ತು ಒಂದು ಸಾವಿರ ರೂ ನಗದು ಬಹುಮಾನ, ಪ್ರಮಾಣಪತ್ರ, ಸ್ಮರಣಿಕೆ ಮತ್ತು ಭಾವ ಸಂಗಮ‌ ಸನ್ಮಾನ ಒಳಗೊಂಡಿರುತ್ತದೆ.
ಮೆಚ್ಚುಗೆ ಪಡೆದ ಕಥೆಗಾರರು ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ 94 ಕಥೆಗಾರರಿಗೆ ಭಾವ ಸಂಗಮ ಸಮಾಗಮಕ್ಕೆ ವಿಶೇಷ ಆಮಂತ್ರಣ ನೀಡಲಾಗುತ್ತದೆ. ಪಾರದರ್ಶಕವಾಗಿ ತೀರ್ಪು ನೀಡಿದ ಹಿರಿಯ ಸಾಹಿತಿ ಎಲ್‌.ಎಸ್. ಶಾಸ್ತ್ರಿ ಮತ್ತು ಪಾಲ್ಗೊಂಡ ಎಲ್ಲರೂ ಅಭಿನಂದನಾರ್ಹರು. ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳು ಎಂದು ಪ್ರಶಸ್ತಿ ಸಮಿತಿ ಸಂಯೋಜಕ ಉಮಾತನಯರಾಜ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು