ಇತ್ತೀಚಿನ ಸುದ್ದಿ
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ 12ನೇ ವರ್ಷದ ಕಲಾಪರ್ವ ಪ್ರಶಸ್ತಿ ಪ್ರದಾನ
January 3, 2021, 10:05 PM

ಕಟೀಲು(reporterkarnataka news):pp0
ಯಕ್ಷಗಾನವು ಮಕ್ಕಳು ಹಾಗೂ ಯುವಜನಾಂಗದಲ್ಲಿ ಧಾರ್ಮಿಕ ಪ್ರಜ್ಞೆ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಉತ್ತಮ ವೇದಿಕೆಯಾಗಿದೆ ಎಂದು ಬೆಂಗಳೂರು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ನ ಬಂಟ್ವಾಳ ಹೇಳಿದರು.
ಭಾನುವಾರ ನಡೆದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ 12 ನೇ ವರ್ಷದ ವಾರ್ಷಿಕ ಕಲಾಪರ್ವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಶುಭ ಹಾರೈಸಿದರು. ಕಟೀಲು ದೇವಳದ ತಂತ್ರಿಗಳಾದ ವೇದವ್ಯಾಸ ತಂತ್ರಿ ಅಧ್ಯಕ್ಷತೆ ವಹಿಸಿದ್ದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಸರಗೋಡು ಸಿರಿಯ ಶ್ರೀ ಶಂಕರನಾರಾಯಣ ದೇವಳದ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ, ಮುಂಬಯಿ ಉದ್ಯಮಿ ಪ್ರವೀಣ್ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಲೀಲಾಕ್ಷ ಕರ್ಕೇರಾ, ಎಕ್ಕಾರು, ಬಜಪೆ ಸೇವಾ ವ್ಯವಸಾಯ ಸಹಕಾರಿ ಬ್ಯಾಂಕ್ ವ ರತ್ನಾಕರ ಶೆಟ್ಟಿ, ಸಿ.ಎ. ಸುದೇಶ್ ರೈ, ಮಂಗಳೂರು ಉದ್ಯಮಿ ನರೇಶ್ ಶೆಣೈ, ಉದ್ಯಮಿ ಮಂಗಳೂರು ಗಿರಿಧರ ಶೆಟ್ಟಿ, ಬಿಪಿನ್ ಪ್ರಸಾದ್ ಶೆಟ್ಟಿ ಕೊಡೆತ್ತೂರುಗುತ್ತು, ಸೌಂದರ್ಯ ಪ್ಯಾಲೇಸ್ ನ ಸೌಂದರ್ಯ ರಮೇಶ್ ಕಟೀಲು, ಶ್ರೀ ಡೆವೆಲಪ್ಪರ್ ನ ಗಿರೀಶ್ ಶೆಟ್ಟಿ ಕಟೀಲು, ಸಾಂತಬೈಲು, ಪಡುಪೆರಾರ ರಾಮಚಂದ್ರ ಕಾವ, ಉದ್ಯಮಿ ಕೇಶವ ಸನಿಲ್, ಉದ್ಯಮಿ ಅಶೋಕ್ ಹೊಸ್ಮಾರು ಬಂಟ್ವಾಳ, ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿ, ಕೃಷ್ಣ ಪ್ರಸಾದ್ ಶೆಟ್ಟಿ , ವಿಷ್ಣುಪ್ರಸಾದ ಶೆಟ್ಟಿ, ಡಾ.ಎಂ ಪ್ರಭಾಕರ ಜೋಷಿ, ಅನಂತ ಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ದಯಾನಂದ ಮಾಡ, ವಾಸುದೇವ ಶೆಣೈ, ರಾಘವೇಂದ್ರ ಆಚಾರ್ಯ ಬಜಪೆ, ಸ್ಕಂದ ಪ್ರಸಾದ್ ಭಟ್, ರಾಜೇಶ್ ಐ, ಕೃಷ್ಣ ಕೆ, ಮಿಥುನ ಕೊಡೆತ್ತೂರು, ವಾದಿರಾಜ ಕಲ್ಲೂರಾಯ ಮತ್ತಿತತರರು ಉಪಸ್ಥಿತರಿದ್ದರು.
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ
ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.
ಕಟೀಲು ಮೇಳ ಹಿಮ್ಮೇಳ ಕಲಾವಿದ ಮೋಹನ ಶೆಟ್ಟಿಗಾರ್ ಮಿಜಾರು ಶ್ರೀ ದುರ್ಗಾ ಮಕ್ಕಳ ಮೇಳದ ಪ್ರಶಸ್ತಿ, ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ ಹಾಗೂ ಸಂಶೋಧಕ ರಾಘವ ನಂಬಿಯಾರ್ ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ, ಖ್ಯಾತ ಹಿಮ್ಮೇಳ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್ ಶ್ರೀ ಕ್ಷೇತ್ರ ಕಟೀಲು ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ, ಪ್ರತಿಭಾನ್ವಿತ ಯುವ ಹಿಮ್ಮೇಳ ಕಲಾವಿದ ಅಕ್ಷಯ ಕುಮಾರ್ ವಿಟ್ಲ ಅವರಿಗೆ ಶ್ರೀ ಕ್ಷೇತ್ರ ಕಟೀಲು ಶ್ರೀನಿಧಿ ಆಸಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ನಡೆಯಿತು. ಬಳಿಕ ಮಕ್ಕಳ ಮೇಳದ ಪ್ರಾಕ್ತನ ಪ್ರಸ್ತುತ ವಿದ್ಯಾರ್ಥಿಗಳಿಂದ ರಾಮ. ರಾವಣ. ಮೈರಾವಣ, ಹನೂಮಂತ ಒಡ್ಡೋಲಗಗಳ ಸಹಿತ ಮಹಿರಾವಣ ಯಕ್ಷಗಾನ ಪ್ರದರ್ಶನಗೊಂಡಿತು.