ಇತ್ತೀಚಿನ ಸುದ್ದಿ
ಐಸ್ ಕ್ರೀಂನಲ್ಲಿ ವಿಷ ಬೆರೆಸಿ ತಂದೆ ತಾಯಿಯ ಹತ್ಯೆಗೆ ಯತ್ನಿಸಿದ ಪುತ್ರ, ತಂಗಿ ಸಾವು: ಆತನ ವಯಸ್ಸು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ !
August 14, 2020, 9:14 AM

ಕಾಸರಗೋಡು(reporterkarnatakanews): ಆಸ್ತಿ ಲಪಟಾಯಿಸಲು ಮಗನೊಬ್ಬ ತಂದೆಯನ್ನೆ ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕಾಸರಗೋಡು ಜಿಲ್ಲೆಯ ಹೊಸದುರ್ಗ ಸಮೀಪದ ಬಲಾಳ್ ಎಂಬಲ್ಲಿ ಈ ಪ್ರಕರಣ ವರದಿಯಾಗಿದೆ. ತಂದೆ- ತಾಯಿ ಮತ್ತು ಸಹೋದರಿಗೆ ವಿಷ ಬೆರೆಸಿದ ಆಹಾರ ನೀಡಿ ಹತ್ಯೆ ಮಾಡಲು ಯತ್ನಿಸಿದ್ದಾನೆ. ತಂದೆ ಮತ್ತು ತಾಯಿ ಬದುಕಿ ಉಳಿದಿದ್ದಾರೆ. ತಂದೆ ಬೋನಿ ಹೊಸದುರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂಗಿ ಸಾವನ್ನಪ್ಪಿದ್ದಾಳೆ.
ಬೋನಿ ಕುಟಂಬ 4.5 ಎಕರೆ ಆಸ್ತಿ ಹೊಂದಿತ್ತು. ಇದರ ಮೇಲೆ ಕಣ್ಣಿರಿಸಿದ್ದ ಮಗ ಆಲ್ಬೀನ್ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮೊದಲಿಗೆ ಆಹಾರದಲ್ಲಿ ಇಲಿ ವಿಷ ನೀಡಿ ಕೊಲ್ಲಲ್ಲು ಯತ್ನಿಸಲಾಯಿತು. ಅದು ಫಲ ನೀಡದಿದ್ದಾಗ ತಂದೆಗೆ ಐಸ್ ಕ್ರೀಂ ನಲ್ಲಿ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
16 ವರ್ಷ ಪ್ರಾಯದ ತಂಗಿ, ಅಣ್ಣನ ಕೃತ್ಯದಿಂದ ಸಾವನ್ನಪ್ಪಿದ್ದಾಳೆ. ಆಲ್ಬೀನ್ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಆತನ ವಯಸ್ಸು ಕೇವಲ 22 ವರ್ಷ. ಆಸ್ತಿ ಮಾರಾಟ ಮಾಡಿ ಬಂದ ಹಣದಿಂದ ಪಲಾಯನ ಮಾಡಿ ಐಷಾರಾಮಿಯಾಗಿ ಬದುಕುವ ಸಂಚು ರೂಪಿಸಿದ್ದ. ಮನೆಯವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿ ಅದು ಸಾಮೂಹಿಕ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಆತ ಸಂಚು ರೂಪಿಸಿದ್ದ ಎಂದು ವರದಿಯಾಗಿದೆ.