ಇತ್ತೀಚಿನ ಸುದ್ದಿ
8 ತಿಂಗಳ ದೀರ್ಘಕಾಲದ ಬಳಿಕ ಮಂಗಳೂರು- ಕಾಸರಗೋಡು ಅಂತರ್ ರಾಜ್ಯ ಬಸ್ ಸಂಚಾರ ಆರಂಭ
November 16, 2020, 5:41 PM

ಮಂಗಳೂರು(reporterkarnataka news): ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸುಮಾರು 8 ತಿಂಗಳ ದೀರ್ಘಕಾಲದ ಬಳಿಕ ಕರ್ನಾಟಕ ಮತ್ತು ಕೇರಳ ನಡುವೆ ಅಂತರ್ ರಾಜ್ಯ ಬಸ್ ಸಂಚಾರ ಆರಂಭಗೊಂಡಿದೆ.
ಕರ್ನಾಟಕದ ಮಂಗಳೂರಿನಿಂದ ಕೇರಳದ ಕಾಸರಗೋಡಿಗೆ ಶನಿವಾರದಿಂದ ಬಸ್ ಸಂಚಾರ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ.17ರಿಂದ ಕಾಲೇಜು ಆರಂಭವಾಗಲಿದೆ. ಮಂಗಳೂರಿನ ಹೆಚ್ಚಿನ ಕಾಲೇಜುಗಳಲ್ಲಿ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಉಭಯ ರಾಜ್ಯಗಳ ನಡುವೆ ಇದೀಗ ಬಸ್ ಸಂಚಾರ ಆರಂಭಗೊಂಡಿರುವುದರಿಂದ ಅನಿಶ್ಚಿತತೆಗೆ ತೆರೆ ಎಳೆದಂತಾಗಿದೆ.