ಇತ್ತೀಚಿನ ಸುದ್ದಿ
ಕಾಸರಗೋಡಿನಲ್ಲಿ ಹೊಸದಾಗಿ 85 ಮಂದಿಗೆ ಕೊರೊನಾ ಸೋಂಕು
August 24, 2020, 1:53 AM

ತಿರುವನಂತಪುರಂ(reporter Karnataka): ಕಾಸರಗೋಡಿನಲ್ಲಿ ಕೊರೊನಾದ ಅಟ್ಟಹಾಸ ಮುಂದುವರಿದಿದೆ. ಹೊಸದಾಗಿ 85 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ. ಇನ್ನೊಂದೆಡೆ ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧ ವಿಧಿಸಬಾರದು ಎಂಬ ಬೇಡಿಕೆ ತೀವ್ರಗೊಂಡಿದೆ. ಕೇಂದ್ರದ ಆದೇಶವನ್ನು ಜಿಲ್ಲೆಯಲ್ಲಿ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಕೇರಳದಲ್ಲಿ ಹೊಸದಾಗಿ 1908 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಐದು ಮಂದಿಯ ಪ್ರಾಣವನ್ನು ಕೊರೊನಾ ಒಂದೇ ದಿನ ಕೇರಳದಲ್ಲಿ ಅಪಹರಿಸಿದೆ.