ಇತ್ತೀಚಿನ ಸುದ್ದಿ
ಕಾಸರಗೋಡು ನಗರಸಭೆ ಚುನಾವಣೆ: ಯುಡಿಎಫ್ ಗೆಲುವು, ಬಿಜೆಪಿಗೆ ಒಂದು ಸ್ಥಾನ ಅಧಿಕ
December 17, 2020, 8:50 AM

ಕಾಸರಗೋಡು(reporterkarnataka news): ಭಾರೀ ಕುತೂಹಲ ಕೆರಳಿಸಿದ್ದ ನಗರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲವು ಸಾಧಿಸಿದೆ. 21 ಕ್ಷೇತ್ರಗಳಲ್ಲಿ ಯುಡಿಎಫ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಯುಡಿಎಫ್ ನಲ್ಲಿ ಮುಖ್ಯ ಪಕ್ಷವಾಗಿರುವ ಮುಸ್ಲಿಂ ಲೀಗ್ ಭರ್ಜರಿ ಗೆಲುವು ದಾಖಲಿಸಿದೆ.
ಬಿಜೆಪಿ 14 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚು ಗಳಿಸಿದೆ. 13 ಕ್ಷೇತ್ರಗಳಲ್ಲಿ ಈ ಹಿಂದೆ ಗೆಲುವು ದಾಖಲಿಸಿತ್ತು.
ಮೂರು ಮಂದಿ ಪಕ್ಷೇತರರು ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ಇದರಲ್ಲಿ ಓರ್ವ ಬಂಡುಕೋರ ಅಭ್ಯರ್ಥಿ ಕೂಡ ಸೇರಿದ್ದಾರೆ.
ಕಾಸರಗೋಡು ನಗರ ಸಭೆ ಒಟ್ಟು 38 ಸದಸ್ಯರನ್ನು ಹೊಂದಿದೆ.