ಇತ್ತೀಚಿನ ಸುದ್ದಿ
ಕಾಸರಗೋಡಿನಲ್ಲಿ ಕೊರೊನಾ ಅಬ್ಬರ: 102 ಮಂದಿಗೆ ಸೋಂಕು: 73,904 ಗುಣಮುಖ
September 12, 2020, 2:47 AM

ತಿರುವನಂತಪುರಂ(reporterkarnataka news): ಕೇರಳದಲ್ಲಿ ಮಾರಕ ಕೊರೊನಾದ ಅಬ್ಬರ ಮುಂದುವರಿದಿದೆ. ಶುಕ್ರವಾರ ಕೇರಳದಲ್ಲಿ ಹೊಸದಾಗಿ 2988 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಶುಕ್ರವಾರ ಒಂದೇ ದಿನ 14 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಕಾಸರಗೋಡಿನಲ್ಲಿ ಕೂಡ ಕೊರೊನಾ ಹಾವಳಿ ವ್ಯಾಪಕವಾಗಿ ಹರಡುತ್ತಿದೆ. ಕಳೆದ 24 ಗಂಟೆಯಲ್ಲಿ 102 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ..
ಕೇರಳದಲ್ಲಿ ಕೊರೊನಾ ಸೋಂಕಿತ 27, 877 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದ 73, 904 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.