9:52 PM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ತುಳುನಾಡ ದೈವಾರಾಧಕರ ಸಂಘ ಅಜೆಕಾರು ವಲಯ ಉದ್ಘಾಟನೆ ಸಮಾರಂಭದಲ್ಲಿ ಮಾ.ಕಾರ್ತಿಕ್‌ಗೆ ಸನ್ಮಾನ

November 21, 2020, 7:02 PM

ಕಾರ್ಕಳ(Reporter Karnataka News)

ತುಳುನಾಡ ದೈವಾರಾಧಕರ ಸಂಘ ಕಾರ್ಕಳ ತಾಲೂಕು ಅಜೆಕಾರು ವಲಯದ ಉದ್ಘಾಟನಾ ಸಮಾರಂಭ ಹಾಗೂ ಮಾ.ಕಾರ್ತಿಕ್ ಅವರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ಕೆರ್ವಾಶೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಜಗದೀಶ್ ಭಟ್, ತುಳುನಾಡ ಕಟ್ಟು ಕಟ್ಟಳೆ ನಾವು ಉಳಿಸಿ ಬೆಳೆಸಬೇಕಾಗಿದೆ. ಸಂಘಟನೆಯ ಮೂಲಕ ಆ ಕಾರ್ಯ ಮಾಡಲು ಸಾಧ್ಯ. ಸಂಘವೆಂದ ಮೇಲೆ ಎಲ್ಲರೂ ಸೇರಿ ಉತ್ತಮ ವಿಷಯಗಳ ಬಗ್ಗೆ ಅರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭ ದೈವಾರಧನೆಯ ಕ್ಷೇತ್ರದಲ್ಲಿ ವಿಶೇಷ ಸೇವೆ ನೀಡಿದ ವಸಂತ್ ಶೆಟ್ಟಿ ಅಜೆಕಾರ್, ಸಂಜೀವ ಶೇರಿಗಾರ್, ಶಿರ್ಲಾಲು ಸುಶೀಲ, ಜಲಜ ಹೆರ್ಮುಂಡೆ, ರಾಜು ಪೂಜಾರಿ, ಕೆ.ಮಹಮ್ಮದ್, ತೋಮ, ಅಪ್ಪಿ ಕೊರತಿ ಕೆರ್ವಾಶೆ ಅವರನ್ನು ಸನ್ಮಾನಿಸಲಾಯಿತು.

ಕರಿಯಜ್ಜೆ ಹಾಡಿನ ಮೂಲಕ ಜನಮನ ಸೆಳೆದ ಮಾ.ಕಾರ್ತಿಕ್ ಕಾರ್ಕಳ ಹಾಗೂ ಡಮರುಗ ತಂಡದ ಜಿ.ಎಸ್.ಗುರುಪುರ, ಪ್ರಸಾದ್ ಕೊಳಂಬೆ, ಚೇತನ್ ಕಲ್ಲಡ್ಕ, ಗಾಯಕಿ ಚೈತ್ರಾ ಕಲ್ಲಡ್ಕ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್.ಗುರುಪುರ, ಮಾ.ಕಾರ್ತಿಕ್‌ನ ಅತ್ಯದ್ಭುತ ಪ್ರತಿಭೆ ದೇವರ ವರವೇ ಆಗಿದೆ. ಅನೇಕ ಕಡೆಗಳಲ್ಲಿ ಜನರು ಬಾಲಕನನ್ನು ಗುರುತಿಸಿದ್ದಾರೆ ಸನ್ಮಾನಿಸಿದ್ದಾರೆ, ಆದರೆ ಅದರ ನಡುವೆ ಅನೇಕ ಋಣಾತ್ಮಕ ಮಾತುಗಳು ಕೇಳಿ ಬರುತ್ತಿದೆ. ಮಗುವಿನ ಮನೆಯ ಪರಿಸ್ಥಿತಿ ನೋಡಿದವರು ಅವನ ಬಗ್ಗೆ ಯಾವುದೇ ರೀತಿಯ ಋಣಾತ್ಮಕ ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯ ಇಲ್ಲ. ಸಂಘದ ಮೂಲಕವಾಗಿ ನಾವೂ ಕಾರ್ತಿಕ್ ಅವನ್ನನ್ನು ಸಂಪರ್ಕಿಸಲು ಸಾಧ್ಯವಾಗಿದೆ ಅದೇ ರೀತಿ ಮಗುವಿನ ಏಳಿಗೆಗಾಗಿ ಸದಾ ತುಡಿಯುತ್ತಿರುವ ಸಂಘದ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೋಂಟು ಪಾಣಾರ ಅವರನ್ನು ಅಭಿನಂದಿಸಲಾಯಿತು.

ಅಧ್ಯಕ್ಷತೆ ವಹಿಸಿ ತುಳುನಾಡ ದೈವಾರಾಧಕರ ಸಂಘಧ ಕಾರ್ಕಳ ತಾಲೂಕು ಅಧ್ಯಕ್ಷ ಅಶೋಕ್ ಶೆಟ್ಟಿ ಮಾತನಾಡಿದರು.

ಕೆರ್ವಾಶೆ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್, ಜಗದೀಶ್ ಭಟ್, ಸಾಣೂರಿನ ಶ್ರೀರಾಮ್ ಭಟ್, ಪಡಂಗಡಿ ಗುತ್ತು ಅನಿಲ್ ಕುಮಾರ್ ಜೈನ್, ಬಗ್ವಾಡಿಗುತ್ತು ಯಶೋಧರ ಶೆಟ್ಟಿ, ಸುಧಾಕರ್ ಪಾತ್ರಿ ಪಡುಬಿದ್ರಿ, ಸಾಣೂರು ವಲಯ ಅಧ್ಯಕ್ಷ ಗೋಪಾಲ ಪೂಜಾರಿ, ರಾಮ ಪಾಣೆರ್, ಮಾಧವ ಪಂಬದ ಪಡುಬಿದ್ರಿ, ಸುನೀಲ್ ಶೆಟ್ಟಿ, ಪ್ರಕಾಶ್ ಪೂಜಾರಿ, ಬಜಗೋಳಿ ವಲಯಾಧ್ಯಕ್ಷ ವಾಸು ಪಾಣಾರ ಮಾಳ, ಕಾಪು ವಲಯ ಪ್ರಧಾನ ಕಾರ್ಯದರ್ಶಿ ಸತೀಶ್ ಮತ್ತಿತರರು ಭಾಗವಹಿಸಿದ್ದರು.

ಸದಾನಂದ ಸಾಲ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜು ಪಾಣಾರ ವಂದಿಸಿದರು. ಶಶಿಧರ್ ಕುಲಾಲ್ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು