ಇತ್ತೀಚಿನ ಸುದ್ದಿ
ಕರ್ನಾಟಕ – ಕೇರಳ ಗಡಿ ಭಾಗದ ಎಲ್ಲ ರಸ್ತೆಗಳು ಕೊನೆಗೂ ಓಪನ್
August 16, 2020, 10:26 AM

ಮಂಗಳೂರು(reporterkarnataka news): ದಕ್ಷಿಣ ಕನ್ನಡ ಜಿಲ್ಲೆಯು ಕೇರಳದೊಂದಿಗೆ ಹಂಚಿಜೊಂಡಿರುವ ಎಲ್ಲ ಗಡಿ ರಸ್ತೆಗಳನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ನೀಡಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ ಕೇರಳದೊಂದಿಗಿನ ಗಡಿ ರಸ್ತೆಗಳನ್ನು ಮುಚ್ಚಲಾಗಿತ್ತು.ಇದೀಗ ಅನ್ ಲಾಕ್ ಮಾರ್ಗದರ್ಶಿ ಪ್ರಕಾರ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆಅವಕಾಶ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಂಚಾರ ನಿರ್ಬಂಧದಿಂದ ಉಭಯ ರಾಜ್ಯಗಳ ಗಡಿ ಪ್ರದೇಶದ ಜನರು ಕಷ್ಟ ಅನುಭವಿಸುತ್ತಿದ್ದರು. ದಿನ ನಿತ್ಯ ಕೆಲಸಕ್ಕೆ ಹೋಗುವವರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು.