ಇತ್ತೀಚಿನ ಸುದ್ದಿ
ಕರಿಪುರಂ ವಿಮಾನ ದುರಂತ: ಉನ್ನತ ಮಟ್ಟದ ತನಿಖೆಗೆ ಕೇಂದ್ರ ಆದೇಶ
August 8, 2020, 3:29 AM

ಕಾಸರಗೋಡು(reporterkarnatakanews): ಕೇರಳದ ಕರಿಪುರಂ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಕುರಿತು ಉನ್ನತ ಮಟ್ಟದ ತನಿಖೆಗೆ ಕೇಂದ್ರ ಸರಕಾರ ಆದೇಶ ನೀಡಿದೆ.
ಮುಂಬೈ ಮತ್ತು ದೆಹಲಿಯಿಂದ ಉನ್ನತ ಅಧಿಕಾರಿಗಳು ವಿಶೇಷ ವಿಮಾನದ ಮೂಲಕ ಶನಿವಾರ ಕರಿಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಕೇಂದ್ರ ವಿದೇಶಾಂಗ ರಾಜ್ಯ ಸಚಿವ ವಿ. ಮುರಳೀಧರನ್ ಕೂಡ ಆಗಮಿಸಲಿದ್ದಾರೆ.
ವಿಮಾನ ದುರಂತದಲ್ಲಿ ಇದುವರೆಗೆ 18 ಮಂದಿ ಮೃತಪಟ್ಟಿದ್ದಾರೆ. ಆದರೆ ದುರಂತದಲ್ಲಿ ಗಾಯಗೊಂಡಿರುವ 14 ಮಂದಿಯ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಭಾರೀ ಮಳೆಯಿಂದಾಗಿ ವಿಮಾನ ಸ್ಕಿಡ್ ಆದ್ದದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.