2:08 PM Saturday5 - December 2020
ಬ್ರೇಕಿಂಗ್ ನ್ಯೂಸ್
ಕೊವಾಕ್ಸಿನ್ ಲಸಿಕೆ ಪರೀಕ್ಷೆಗೆ ಗುರಿಯಾಗಿದ್ದ ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಗೆ ಕೊರೊನಾ ಸೋಂಕು ಐಎಂಎ ವಂಚನೆ ಪ್ರಕರಣ: ಮಾಜಿ ಸಚಿವ ರೋಷನ್ ಬೇಗ್ ಗೆ ಸಿಬಿಐ ಕೋರ್ಟ್… ಕನ್ನಡ – ಕಾವೇರಿಗೆ ಕರಾವಳಿ ಜಿಲ್ಲೆ ಬಂದ್ ಆಗೋಲ್ಲ:  ದಕ್ಷಿಣ ಕನ್ನಡ, ಉಡುಪಿಯಲ್ಲಿ… ಬೆಳಗಾವಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ಮತ್ತೆ ನರ್ತಿಸಲಿದೆ ಕದ್ರಿ ಸಂಗೀತ ಕಾರಂಜಿ: ಶನಿವಾರ,  ಭಾನುವಾರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕದ್ರಿ –… ದಿಲ್ಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ  ಶ್ರೀನಿವಾಸಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಜಿ ಮೇಯರ್, ಕಾಂಗ್ರೆಸ್ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಕೆ.ಕೆ. ಮೆಂಡನ್ ಇನ್ನಿಲ್ಲ ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ

ಇತ್ತೀಚಿನ ಸುದ್ದಿ

ಗಣಿ ಮಾಫಿಯಾಕ್ಕೆ ನಡುಗುತ್ತಿದೆ ಕಾರಿಂಜೇಶ್ವರ ಸನ್ನಿಧಿ: ಭಕ್ತರು, ಸ್ಥಳೀಯರು ಏನು ಹೇಳುತ್ತಾರೆ? 

October 17, 2020, 9:26 AM

ಬಂಟ್ವಾಳ(reporterkarnataka news): ವಗ್ಗ ಸಮೀಪದ ಕಾರಿಂಜೇಶ್ವರನ ಸನ್ನಿಧಿ ಇಂದು ಸುತ್ತಮುತ್ತಲಿನ ಕಲ್ಲು ಕೋರೆಗಳ ಸ್ಫೋಟದಿಂದ ನಡು ಮುರಿದು ಬಿದ್ದಿದೆ. ಇದು ಭಕ್ತರು ಹಾಗೂ ಪ್ರಕೃತಿಪ್ರಿಯರಲ್ಲಿ ಆತಂಕ ಮತ್ತು ಅಳಲು ಸೃಷ್ಟಿಸಿದೆ.ಪ್ರಕೃತಿಯೇ ಶಿವ. ಶಿವನೇ ಪ್ರಕೃತಿ ಎನ್ನುವಂತಿದೆ ಕಾರಿಂಜ ಬೆಟ್ಟ.

ಪ್ರಕೃತಿ ಪ್ರಿಯರಲ್ಲಿ ಯುಗಯುಗಾಂತರದಲ್ಲಿ ಅಹ್ಲಾದ ಮೂಡಿಸಿಕೊಂಡು ಮೆರೆದ ದೇಗುಲ ಇದು. ಆದರೆ ಗಣಿಗಾರಿಕೆಯಿಂದ ಇಂದು ಸಂಪೂರ್ಣ ನಲುಗಿ ಹೋಗಿ ತನ್ನ ರಕ್ಷಣೆಗಾಗಿ ಮೊರೆಯಿಡುತ್ತಿದೆ.

ಸುಂದರವಾಗಿ ಕಾಣುವ ಕಾರಿಂಜಗಿರಿ ತುತ್ತ ತುದಿಯನ್ನೊಮ್ಮೆ ಏರಿ ಕಣ್ಣು ಹಾಯಿಸಿದರೆ ಸುತ್ತಮುತ್ತಲಿನ ಹಚ್ಚ ಹಸುರಿನ ಪ್ರಕೃತಿ ನಡುವೆ ಕಲ್ಲಿನ ಕೋರೆಗಳೇ ತಲೆ ಎತ್ತಿ ನಿಂತಿರುವುದು ಕಾಣ ಸಿಗುತ್ತದೆ. ಭಾರಿ ಗಾತ್ರದ ಬಂಡೆಗಳನ್ನು ಒಡೆಯಲು ಬಳಸುವ ಪ್ರಬಲ ಡೈನಮೈಟ್ ಸ್ಪೋಟಕಗಳಿಂದ ದೇಗುಲ ದಿನೇ ದಿನೇ ಶಿಥಿಲಾವಸ್ಥೆಯನ್ನು ತಲುಪಿ ಎಲುಬಿನ ಹಂದರವಾಗುತ್ತಿದೆ ಎನ್ನುವುದು ಸ್ಥಳೀಯರು ಆರೋಪಿಸುತ್ತಾರೆ.

ಪ್ರಬಲವಾದ ಸ್ಪೋಟಕಗಳಿಂದ ಭೂಬಿರಿಯುವ ಕಂಪನವನ್ನು ತಾಳಿಕೊಳ್ಳಲಾಗದೆ ದೇಗುಲದ ಸುತ್ತು ಪೌಳಿ ಮುರಿದು ಬಿದ್ದಿದೆ. ಇನ್ನಷ್ಟು ಅನಾಹುತಗಳಾಗುವ ಮುನ್ನ ಎಚ್ಚೆತ್ತುಕೊಳ್ಳಿ ಎನ್ನುವಂತೆ ಶಿವ ಎಚ್ಚರಿಕೆಯನ್ನು ನೀಡಿ ಮೌನಕ್ಕೆ ಜಾರಿದ್ದಾನೆ ಎಂದು ಭಕ್ತರು ಹೇಳಿ ಕೊಳ್ಖುತ್ತಿದ್ದಾರೆ.

ಕಂಪನದ ಕಥೆ: ಹೌದು, ಅದು ಕಡಿಮೆ ಅಂದರೂ ಆರು ತಿಂಗಳು

ಹಿಂದಿನ ಕಥೆ. ಅದೊಂದು ದಿನ ಭಾನುವಾರದ ಮಧ್ಯಾಹ್ನದ ಪೂಜೆಯ ಸಮಯ. ರಜೆಯ ದಿನವಾದುದರಿಂದ ಭಕ್ತರ ದಟ್ಟನೆ ಎಂದಿಗಿಂತ ಅಧಿಕವಾಗಿತ್ತು. ಆ ಜನಸಮೂಹದ ಮಧ್ಯೆ ನಡು ವಯಸ್ಸು ದಾಟಿದ ದಂಪತಿ ಕಾರಿಂಜದ ಪಾರ್ವತಿ ಸನ್ನಿಧಿಯಲ್ಲಿ ಕೈ ಮುಗಿದು ಕಣ್ಣೀರು ಒರಸುತ್ತಾ ದೇವರನ್ನು ಬೇಡುವುದಲ್ಲೇ ತಲ್ಲೀಣರಾಗಿದ್ದರು.

ಯಾವುದೋ ಭಯಂಕರವಾದ ಕಷ್ಟನಷ್ಟಗಳು ಅವರನ್ನು ಕಂಗೆಡಿಸಿತ್ತು. ಅವರ ತದೇಕ ಭಕ್ತಿಯ ಮುಂದೆ ದೇವರ ಪೂಜೆಯ ಡೋಲು ಘಂಟೆಗಳು ಸದ್ದು ಮಾಡುತ್ತವೆ. ದಂಪತಿಗಳ ಪ್ರಾರ್ಥನೆಯ ಮತ್ತಷ್ಟು ಇನ್ನಷ್ಟು ಅನ್ನುವಂತೆ ಹೆಚ್ಚಾದಾಗ ದೇವರಿಗೆ ಶೃಂಗಾರಕ್ಕೆ ತೊಡಿಸಿದ ಹೂ ಮಾಲೆಗಳು ಇದ್ದಕ್ಕಿದ್ದಂತೆ ಕೆಳ ಬಿದ್ದು ದೇವರ ಪದತಳದಲ್ಲಿದ್ದವು. ತಾಯಿ ಅಭಯ ನೀಡಿದಳು ಅನ್ನುವ ಭಾವದಿಂದ ಆ ದಂಪತಿಯ ಕಣ್ಣಂಚು ಒದ್ದೆಯಾಗಿದ್ದವು. ಎಲ್ಲವನ್ನೂ ಗೆದ್ದವರಂತೆ ನಗುಮುಖದಿಂದ ದಂಪತಿ ಮನೆಯ ಕಡೆ ಮುಖ ಮಾಡಿದ್ದರು.

ನಿಜ ವಿಷಯವೇನೆಙದರೆ

 ಪೂಜೆಯ ಮಧ್ಯೆ ದೇಗುಲದ ಬುಡದಲ್ಲೇ ಬಂಡೆಗಳನ್ನು ಸ್ಪೋಟಕವಿಟ್ಟು ಒಡೆಯುವ ರಭಸಕ್ಕೆ ದೇಗುಲ ಮೂರ್ತಿ ಸಮೇತವಾಗಿ ಕಂಪಿಸಿತ್ತು. ದಿನ ನಿತ್ಯ ಇಂತಹ ಕಂಪನದಿಂದ

ದೇಗುಲದ ಕೊಡಿಮರಕ್ಕೂ ಹಾನಿಯಾಗಿದೆ ಎಂದು ಭಕ್ತರು ಹೇಳುತ್ತಾರೆ. ಗಣಿ ಮಾಫಿಯಾವನ್ನು ಇನ್ನಾದರೂ ನಿಲ್ಲಿಸಬೇಕೆನ್ನುವುದು ಹೆಚ್ಚಿನವರ ವಾದ.

ಇತ್ತೀಚಿನ ಸುದ್ದಿ

ಜಾಹೀರಾತು