ಇತ್ತೀಚಿನ ಸುದ್ದಿ
ಕರ್ಫ್ಯೂ ರದ್ದು; ಎಂದಿನಂತೆ ಬೆಳಗ್ಗಿನವರೆಗೆ ನಡೆಯಲಿದೆ ಕಟೀಲು 6 ಮೇಳಗಳ ಸೇವೆ ಆಟ
December 24, 2020, 6:43 PM

ಕಟೀಲು(reporterkarnataka News);
ರಾಜ್ಯ ಸರಕಾರದ ಆದೇಶದಂತೆ ರಾಜ್ಯಾದ್ಯಂತ ರಾತ್ರಿ 11ರಿಂದ ಬೆಳಿಗ್ಗೆ 5ರ ವರೆಗೆ ಜಾರಿಗೊಳಿಸಿದ್ದ ಕರ್ಫ್ಯೂವನ್ನು ಇಂದು ರದ್ದುಗೊಳಿಸಿದ ಕಾರಣ ಶ್ರೀ ಕಟೀಲಿನ 6 ಮೇಳಗಳ ಸೇವೆ ಆಟಗಳ ಪ್ರದರ್ಶನಗಳನ್ನು ಈ ಮೊದಲಿನಂತೆ ನಡೆಯಲಿದೆ.
ರಾತ್ರಿ 8.3೦ ರಿಂದ ಚೌಕಿ ಪೂಜೆಯೊಂದಿಗೆ ಆರಂಭಿಸಿ ಮರುದಿನ ಬೆಳಿಗ್ಗಿನ ಪೂಜೆಯೊಂದಿಗೆ ಮಂಗಳ ಮಾಡಲಾಗುವುದು ಎಂದು ಮೇಳದ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.