2:34 PM Wednesday24 - April 2024
ಬ್ರೇಕಿಂಗ್ ನ್ಯೂಸ್
ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲೇ ಸಾಗಿ ಪತಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ… ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಚುನಾವಣೆ 60 ದಿನಗಳ ಕಾಲ ನಡೆಯುತ್ತಿರುವುದು ಅನುಮಾನಾಸ್ಪದ: ಮಾಜಿ ಸಿಎಂ… ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್…

ಇತ್ತೀಚಿನ ಸುದ್ದಿ

ಕರಾವಳಿಯಲ್ಲಿ 660 ಟನ್ ಗೇರು ಬೀಜ ಉತ್ಪನ್ನ; ಇನ್ನಷ್ಟು ಅಭಿವೃದ್ಧಿಗೆ ಪ್ರತಿಯೊಂದು ಮನೆಗೂ ಗೇರು ಗಿಡ: ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ

11/03/2024, 22:11

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ರಾಜ್ಯದ ಕರಾವಳಿಯಲ್ಲಿ 660 ಟನ್ ಗೇರು ಬೀಜ ಉತ್ಪತ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗೇರು ಕೃಷಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಗೂ ಒಂದು ಗೇರು ಗಿಡವನ್ನು ವಿತರಿಸಲಾಗುವುದು ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.
ಅವರು ಸೋಮವಾರ ತಮ್ಮ ನೂತನ ಕಚೇರಿಯನ್ನು ಉದ್ಘಾಟಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುದರು.

ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯ ಮುಂದೆಯೂ ಒಂದೊಂದು ಗೇರು ಮರ ಇರುತ್ತಿತ್ತು. ಆದರೆ ಇತ್ತೀಚಿನ ದಿನದಲ್ಲಿ ಯಾವ ಮನೆಯ ಎದುರಲ್ಲೂ ಗೇರು ಮರ ನೋಡಲು ಸಿಗುವುದಿಲ್ಲ. ಆದುದರಿಂದ ಮತ್ತೆ ಮನೆ ಮನೆಗೆ ಗೇರು ಗಿಡವನ್ನು ವಿತರಿಸಲಾಗುವುದು. ಒಂದು ಗೇರು ಗಣ್ಣು ತಿನ್ನುವುದರಿಂದ ಅದರಲ್ಲಿ ವಿಟಮಿನ್ ‘ಸಿ’ ಅಂಶ ಹೆಚ್ಚಾಗಿದ್ದು, ಮಕ್ಕಳ ಆರೋಗ್ಯ ವೃದ್ಧಿಸುವುದು ಎಂದರು.
ಮೊದಲಿಗೆ ವಿದೇಶದಿಂದ ಗೇರು ಕೃಷಿ ಬಂದದ್ದಾದರೂ ನಂತರದ ದಿನಗಳಲ್ಲಿ ನಮ್ಮಲ್ಲಿ ಗೇರು ಕೃಷಿ ಉತ್ತಮ ರೀತಿಯಲ್ಲಿ ಬೆಳೆದಿದ್ದು, ಈಗ ರಾಜ್ಯದಲ್ಲಿ 53 ಸಾವಿರ ಟನ್ ಗೇರು ಬೀಜ ಉತ್ಪನ್ನವಾಗುತ್ತಿದ್ದು, ಕರಾವಳಿಯಲ್ಲಿ 660 ಟನ್ ಗೇರು ಬೀಜ ಉತ್ಪತ್ತಿಯಾಗುತ್ತಿದೆ ಎಂದು ಹೇಳಿದರು.
ಕರಾವಳಿಯಲ್ಲಿ 9 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಗೇರು ಕೃಷಿ ನಡೆಯುತ್ತಿದ್ದು, ದೇಶದಲ್ಲಿ 5ನೇ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಉತ್ಪನ್ನದಲ್ಲಿ 6ನೇ ಸ್ಥಾನದಲ್ಲಿದೆ. ಕಳೆದ ವರ್ಷ ಕರಾವಳಿಯಲ್ಲಿ 414 ಲಕ್ಷ ಗೇರು ಬೀಜದಿಂದ ಆದಾಯ ಬಂದಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಚಿವರೊಂದಿಗೆ ಹಾಗೂ ವಿಧಾನಸಭಾ ಸ್ಪೀಕರ್ ಅವರೊಂದಿಗೆ ಮಾತನಾಡಿದ್ದು, ಅನುದಾನ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.
ಕೃಷಿಯ ಅಭಿವೃದ್ಧಿಗೆ ಅರಣ್ಯ ಸಚಿವರಲ್ಲಿ ನರ್ಸರಿ ಸ್ಥಾಪನೆಗಾಗಿ 50 ಕೋಟಿ ಅನುದಾನವನ್ನು ನೀಡಿದ್ದು, ಇದರಿಂದ ಹೊಸ ಗಿಡಗಳನ್ನು ನೆಡಲಾಗುವುದು. ಈಗ ಎನ್‌ಹೆಚ್‌ಎಂ, ಆರ್‌ಕೆವಿಐ, ಡಿಸಿಡಿಇ ಇಂದ ಮಾತ್ರ ಅನುದಾನ ಬರುತ್ತಿದ್ದು, ಇದು ನಿರ್ವಹಣೆಗೆ ಸರಿಓಗುತ್ತಿದೆ. ಆದುದರಿಂದ ಕೃಷಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು, ನಂತರದ ದಿನಗಳಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಸಚಿವರ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ಹೇಳಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ, ಪ್ರಶಾಂತ್ ಕಜಾವ, ಚಂದ್ರಹಾಸ್ ಕರ್ಕೆರ, ಅಪ್ಪಿ, ಶಶಿರೇಖಾ, ಕಲಾ ಮತ್ತಿತರರು ಉಪಸ್ಥಿತರಿದ್ದರು.



ಈ ಸಂದರ್ಭದಲ್ಲಿ ನೂತನ ಗೇರು ಬೀಜ ನಿಗಮ ಮಂಡಳಿ ಅಧ್ಯಕ್ಷೆ ಮಮತಾ ಗಟ್ಟಿಯಾರವನ್ನು ಪಾಲಿಕೆ ವಿಪಕ್ಷ ನಾಯಕ ಟಿ.ಪ್ರವೀಣ್ ಚಂದ್ರ ಆಳ್ವ,ಕಾಂಗ್ರೆಸ್ ನಾಯಕ ಪ್ರಶಾಂತ್ ಕಾಜವ,ಕಾಂಗ್ರೆಸ್ ಮಹಿಳಾ ಮಣಿಗಳು,ಅಧ್ಯಕ್ಷೆ ಮಮತ ಗಟ್ಟಿಯವರ ಗಂಡ ಮಗಳು,ಮಂಗಳೂರು ಪತ್ರಕರ್ತ ಸಂಘದ ವತಿಯಿಂದ ಸನ್ಮಾನಿಸಿ ಶುಭಕೋರಿದರು.

ಇತ್ತೀಚಿನ ಸುದ್ದಿ

ಜಾಹೀರಾತು