ಇತ್ತೀಚಿನ ಸುದ್ದಿ
ಕರಡಿಗೆ ಒಲಿಯಲಿದೆಯೇ ಅವಕಾಶ? ಕೇಂದ್ರ ಸಂಪುಟದಲ್ಲಿ ಸಿಗಲಿದೆಯೇ ಸಚಿವ ಸ್ಥಾನ?
September 28, 2020, 3:41 PM

ನವದೆಹಲಿ(reporterkarnataka news):
ಕೊರೊನಾ ಸೋಂಕಿಗೆ ಇತ್ತೀಚೆಗೆ ಬಲಿಯಾದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಸ್ಥಾನಕ್ಕೆ ರಾಜ್ಯದ ಸಂಸದ ಕರಡಿ ಸಂಗಣ್ಣ ಅವರನ್ನು ನೇಮಿಸುವ ಕುರಿತು ಬಿಜೆಪಿಯಲ್ಲಿ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
ಕರಡಿ ಸಂಗಣ್ಣ ಅವರು ಪಕ್ಷದ ದೆಹಲಿಯ ಹೈಕಮಾಂಡ್ ಹಾಗೂ ರಾಜ್ಯ ಹೈಕಮಾಂಡ್ ನಲ್ಲಿ ಒಳ್ಳೆಯ ಪ್ರಭಾವಿಯಾಗಿದ್ದಾರೆ. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲೂ ಕೊಡುಗೆ ನೀಡಿದ್ದಾರೆ. ಸಂಗಣ್ಣ ಅವರು ಎರಡನೇ ಬಾರಿಗೆ ಸಂಸದರಾವಾಗಲೇ ಸಚಿವರಾಗುತ್ತಾರೆ ಎನ್ನಲಾಗಿತ್ತು. ಆದರೆ ಸುರೇಶ್ ಅಂಗಡಿ ಅವರನ್ನು ಸಚಿವರಾಗಿ ಮಾಡಲಾಯಿತು.
ನಾಲ್ಕು ಬಾರಿ ಶಾಸಕರಾಗಿದ್ದ ಸಂಗಣ್ಣ ಅವರು ಎರಡನೇ ಬಾರಿಗೆ ಸಂಸತ್ ಗೆ ಆಯ್ಕೆಯಾಗಿದ್ದಾರೆ.