6:08 AM Tuesday9 - March 2021
ಬ್ರೇಕಿಂಗ್ ನ್ಯೂಸ್
ಸಾಗರಮಾಲಾ ಯೋಜನೆಯ ಕೋಸ್ಟಲ್ ಬರ್ತ್  ರದ್ದುಪಡಿಸಲು ಒತ್ತಾಯಿಸಿ ಬೆಂಗರೆಯಲ್ಲಿ ಪ್ರತಿಭಟನೆ ಮೂಡುಬಿದರೆ: ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ಎರಡು ದಿನಗಳ ಶೈಕ್ಷಣಿಕ ಪ್ರವಾಸ, ಚಾರಣ ಮಹಿಳಾ ದಿನಾಚರಣೆ ದಿನದಂದೇ ಶಾಕಿಂಗ್ ನ್ಯೂಸ್: ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ 50 ಟನ್ ಬೂದುಗುಂಬಳ ಬೆಳೆಸಿದ ತೀರ್ಥಹಳ್ಳಿ ರೈತ: ಖರೀದಿಗೆ ಸಗಟು ವರ್ತಕರಿಲ್ಲದೆ ಸೋತ!… ಮಂಗಳೂರಿನ ಸಿಮ್ರಾನ್ ಕೋಚಿಂಗ್ ಸೆಂಟರ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ ರಾಜ್ಯ ಬಜೆಟ್ : ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಇಲ್ಲ. 45 ಲಕ್ಷ… ಮಹಿಳೆ ಮತ್ತು ನಾಯಕತ್ವ ಕ್ರೈಸ್ತ ಸಮುದಾಯ ವಿರುದ್ಧ ಸಂಸದ ಪ್ರತಾಪ ಸಿಂಹ ವಿವಾದಿತ ಹೇಳಿಕೆ: ಕಾಂಗ್ರೆಸ್ ಪ್ರತಿಭಟನೆ ಇಂದು ರಾಜ್ಯ ಬಜೆಟ್: ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಥ್ರೋಬಾಲ್ ಪಂದ್ಯಾಟ

ಇತ್ತೀಚಿನ ಸುದ್ದಿ

ಕಾಪು ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲು: ಶಶಿಪ್ರಭಾ ಶೆಟ್ಟಿ ಆಯ್ಕೆ

November 3, 2020, 4:22 PM

ಕಾಪು(reporterkarnataka news): ಹೊಸದಾಗಿ ರಚನೆಯಾದ ಕಾಪು ತಾಲೂಕು ಪಂಚಾಯತ್ ನೂತನ ಅಧ್ಯಕ್ಷರಾಗಿ ಶಶಿಪ್ರಭಾ ಶೆಟ್ಟಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಕಳತ್ತೂರು ವಾರ್ಡ್ ತಾಲೂಕು ಪಂಚಾಯತ್ ಸದಸ್ಯೆ ಯಾಗಿರುವ ಅವರು ಹೊಸದಾಗಿ ರಚನೆಯಾದ 16 ಗ್ರಾಮ ಪಂಚಾಯತ್ ಹಾಗೂ 30 ಗ್ರಾಮಗಳನ್ನೊಳಗೊಂಡ ಕಾಪು ತಾಲೂಕು ಪಂಚಾಯತ್ ಪ್ರಥಮ ಅಧ್ಯಕ್ಷರಾಗಿದ್ದಾರೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಅವರು ಈ ಹಿಂದೆ ಗ್ರಾಮ ಪಂಚಾಯತ್ ಚುನಾವಣೆ ಸ್ಪರ್ಧಿಸಿದ್ದರು. ನಂತರ ಕಳತ್ತೂರು ಕ್ಷೇತ್ರದ ತಾಲೂಕು ಪಂಚಾಯತ್ ಸ್ಥಾನಕ್ಕೆ ಸ್ಪರ್ದಿಸಲು ಪಕ್ಷ ಸೂಚಿಸಿತ್ತು. ಅನಂತರ ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂತರದಿಂದ ಗೆದ್ದು ಬಂದು ತನ್ನ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರನ್ನು ಗೆಲ್ಲಿಸಿಕೊಂಡು ಬಂದದ್ದು  ಈಗ ಇತಿಹಾಸ.

   ನಂತರದಲ್ಲಿ ಎದುರಾದ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ತನ್ನ ಕ್ಷೇತ್ರದಲ್ಲಿ ಬಿಜೆಪಿಗೆ ಅತಿಹೆಚ್ಚು ಮತ ಗಳಿಸುವಲ್ಲಿ ಪ್ರಮುಖಪಾತ್ರ ವಹಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದರು. ಇದೀಗ ಪಕ್ಷ ಗುರುತಿಸಿ  ಅಧ್ಯಕ್ಷ ಸ್ಥಾನ ನೀಡಿದೆ.

    ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಲಾಲಾಜಿ ಆರ್ ಮೆಂಡನ್,  ಪಕ್ಷದ ಅಧ್ಯಕ್ಷರು ಶ್ರೀಕಾಂತ್ ನಾಯಕ್, ಹಿರಿಯರಾದ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಪುರಸಭೆ ಅಧ್ಯಕ್ಷರು ಅನಿಲ್ ಕುಮಾರ್, ಯೋಜನಾ ಪ್ರಾಧಿಕಾರ ಅಧ್ಯಕ್ಷರು ಸುಧಾಮ ಶೆಟ್ಟಿ  ಹಾಗೂ ಪಕ್ಷದ ಹಿರಿಯರು, ಸ್ಥಳೀಯ ಮುಖಂಡರು, ಜಿಲ್ಲಾ ಪಂಚಾಯತ್ ಸದಸ್ಯರು,  ತಾಲೂಕು ಪಂಚಾಯತ್ ಸದಸ್ಯರು ಶುಭಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು