ಇತ್ತೀಚಿನ ಸುದ್ದಿ
ಕಣ್ಣೂರ್ ವಾರ್ಡ್ : ರಸ್ತೆ, ತಡೆಗೋಡೆ ಹಾಗು ವಿವಿಧ ಕಾಮಗಾರಿಗಳ ಉದ್ಘಾಟನೆ
November 17, 2020, 2:05 PM

ಮಂಗಳೂರು(Reporter Karnataka News)
ನಮ್ಮ ನಡಿಗೆ ಅಭಿವೃದ್ಧಿಯ ಕಡೆಗೆ ಕಣ್ಣೂರ್ ವಾರ್ಡಿನ ಪೆರ್ಲ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಸರದ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರ ವಿಶೇಷ ಅನುದಾನದಿಂದ 17 ಲಕ್ಷ ವೆಚ್ಚದಲ್ಲಿ ಹಾಗೂ ಮ.ನ.ಪಾ ಸದಸ್ಯರಾದ ಚಂದ್ರಾವತಿ ವಿಶ್ವನಾಥ್ ಅವರ ಸದಸ್ಯತ್ವ ನಿಧಿಯಿಂದ 3 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ, ತಡೆಗೋಡೆ ಹಾಗು ವಿವಿಧ ಕಾಮಗಾರಿಗಳನ್ನು ಮಂಗಳೂರು ಮಹಾಪೌರ ದಿವಾಕರ್ ಪಾಂಡೇಶ್ವರ ಮಂಗಳವಾರ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಮ.ನ.ಪಾ ಸದಸ್ಯರು ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರ್ ಹಾಗು ಸ್ಥಳೀಯ ಮ.ನ.ಪಾ ಸದಸ್ಯೆ ಚಂದ್ರಾವತಿ ವಿಶ್ವನಾಥ್ ರವರು, ಶಕ್ತಿ ಕೇಂದ್ರದ ಪ್ರಮುಖರಾದ ನವೀನ್ ಕುಲಾಲ್, ಪಕ್ಷದ ಪ್ರಮುಖರು ಹಾಗು ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.