ಇತ್ತೀಚಿನ ಸುದ್ದಿ
ಕಣ್ಣೂರಿನಲ್ಲಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನವಶ: ಮಂಜೇಶ್ವರದ ಇಬ್ಬರ ಬಂಧನ
August 13, 2020, 8:01 AM

ಕಣ್ಣೂರು(reporterkarnataka news): ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ 45 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡಿನ ಮಂಜೇಶ್ವರದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಚಿನ್ನವನ್ನು ಕೊಡೆ, ಬಾಲ್ ಪೆನ್ ಮತ್ತು ಜೀನ್ಸ್ ಬಟನ್ ಗಳಲ್ಲಿ ಅವಿತಿರಿಸಿದ್ದರು.
ಬಂಧಿತರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಕೊರೋನಾದಿಂದಾಗಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲ್ಲ ಎಂಬ ಭಂಡ ಧೈರ್ಯ ದಿಂದ ಆರೋಪಿಗಳು ಚಿನ್ನ ಕಳ್ಳ ಸಾಗಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ದುಬೈನಿಂದ ಆಗಮಿಸಿದ ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಿದಾಗ ಚಿನ್ನ ಪತ್ತೆಯಾಯಿತು