ಇತ್ತೀಚಿನ ಸುದ್ದಿ
ಕಣ್ಣೂರಿನಲ್ಲಿ 500 ಜಿ+3, ಶಕ್ತಿನಗರದಲ್ಲಿ 930 ಜಿ+3 ಮಾದರಿಯ ಮನೆಗಳ ನಿರ್ಮಾಣದ ಕುರಿತು ಆರ್ಥಿಕ ಕ್ರೋಡೀಕರಣ ಸಭೆ
January 13, 2021, 9:02 PM

ಮಂಗಳೂರು(reporterkarnataka news): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ – ಸರ್ವರಿಗೂ ಸೂರು ಯೋಜನೆಯಡಿ ಕಣ್ಣೂರು ಗ್ರಾಮದಲ್ಲಿ ಕರ್ನಾಟಕ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ 500 ಜಿ+3 ಮಾದರಿಯ ಕಾಮಗಾರಿ ಹಾಗೂ ಶಕ್ತಿನಗರದಲ್ಲಿ 930 ಜಿ+3 ಮಾದರಿಯ ಮನೆಗಳ ನಿರ್ಮಾಣದ ಕುರಿತು ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಸಂಬಂಧಿಸಿ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರು, ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತರು, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಬೋಳೂರು, ಪಾಲಿಕೆ ಸದಸ್ಯರಾದ ರಾಧಾಕೃಷ್ಣ, ಮಂಗಳೂರು ಮಹಾನಗರ ಪಾಲಿಕೆಯ ಕರ್ನಾಟಕ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳ ಸಭೆಯು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ನಡೆಯಿತು.