ಇತ್ತೀಚಿನ ಸುದ್ದಿ
ಕನ್ನಡ – ಕಾವೇರಿಗೆ ಕರಾವಳಿ ಜಿಲ್ಲೆ ಬಂದ್ ಆಗೋಲ್ಲ: ದಕ್ಷಿಣ ಕನ್ನಡ, ಉಡುಪಿಯಲ್ಲಿ ಜನಜೀವನ ಸಹಜ ಸ್ಥಿತಿ
December 5, 2020, 1:48 PM

ಮಂಗಳೂರು(reporterkarnataka news): ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಇಂದು ಕರೆನೀಡಿದ ಕರ್ನಾಟಕ ಬಂದ್ ಗೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಯಾವುದೇ ಪೂರಕ
ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಎರಡೂ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ.
ಸಮಸ್ಯೆ ಏನಿದ್ದರೂ ಬಂದ್ ಆಚರಣೆ ಮಾಡುವುದು ತಪ್ಪೇ. ಆದರೆ ಇವೆಲ್ಲವನ್ನು ಮೀರಿ ಇಡೀ ರಾಜ್ಯವೇ ಬಂದ್ ಆದರೂ
ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನ್ನಡ ಮತ್ತು ಕಾವೇರಿ ವಿಷಯದಲ್ಲಿ ಬಂದ್ ಆಗೋಲ್ಲ. ಇಡೀ ರಾಜ್ಯದಲ್ಲೇ ಈ ಹಿಂದೆ ವರನಟ ಡಾ. ರಾಜ್ ಕುಮಾರ್ ನೇತೃತ್ವದಲ್ಲಿ ಗೋಕಾಕ್ ಚಳವಳಿ ನಡೆದಾಗಲೂ ಕರಾವಳಿ ತಣ್ಣಗೆ ಕುಳಿತ್ತಿತ್ತು. ಕಾವೇರಿ ವಿಷಯದಲ್ಲಿ ಇಡೀ ಕರ್ನಾಟಕ ಹಲವು ಬಾರಿ ಬಂದ್ ಆಗಿದ್ದರೂ ಕರಾವಳಿಯಲ್ಲಿ ಏನೂ ಬಂದ್ ಆಚರಣೆ ನಡೆದಿಲ್ಲ. ಅದೆಲ್ಲ ಬಿಡಿ ತಮ್ಮ ಬುಡಕ್ಕೆ ಬಂದ ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ ಸಂಘಟಿಸಿದಾಗಲೂ ದಕ್ಷಿಣ ಕನ್ನಡದ ಜನ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿಲ್ಲ. ಇಲ್ಲಿ ಹೋರಾಟ ಏನಿದ್ದರೂ ಜಾತಿ- ಧರ್ಮಕ್ಕೆ ಮಾತ್ರ ಸೀಮಿತ. ಕೋಮು ವಿಷಯ ಬಂದರೆ ಬಂದ್ ಆಗುತ್ತದೆ.