12:18 AM Sunday7 - March 2021
ಬ್ರೇಕಿಂಗ್ ನ್ಯೂಸ್
ಅಧ್ಯಾತ್ಮ ಭಾರತದ ಆತ್ಮ, ಭರತನಾಟ್ಯ ಅಧ್ಯಾತ್ಮ ಒಳಗೊಂಡ ಕಲೆ: ಪ್ರತಾಪಸಿಂಹ ನಾಯಕ್  ಸೆಕ್ಸ್ ಸಿಡಿ ಪ್ರಕರಣ: ಯುವತಿಯ ವಿಚಾರಣೆಗೆ ಮುನ್ನವೇ ದೂರು ವಾಪಸ್ ಪಡೆಯಲು ಕಲ್ಲಹಳ್ಳಿ… ‘ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ ಅಭಿಯಾನ: ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ಇಳಿದು ತ್ಯಾಜ್ಯ ತೆರವು ಕುಂಬಳ ಕಾಯಿ ಕಳ್ಳ ಗಾದೆ: ಸೆಕ್ಸ್ ಸಿಡಿ ಬಳಿಕ ತಡೆಯಾಜ್ಞೆ ಕೋರುವ ಸಚಿವರ ಸಂಖ್ಯೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ದೆಹಲಿ ಖಾಸಗಿ ಆಸ್ಪತ್ರೆಗೆ ಸಂಸದ ಅನಂತ ಕುಮಾರ್ ಹೆಗಡೆ ದಾಖಲು: ಕಾಲಿಗೆ ಶಸ್ತ್ರ… ತಮಿಳುನಾಡು ವಿಧಾನಸಭೆ ಚುನಾವಣೆ: 243 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ?… ಅಸ್ಸಾಂ: 126 ಸ್ಥಾನಗಳಲ್ಲಿ ಬಿಜೆಪಿ 92ರಲ್ಲಿ ಸ್ಪರ್ಧೆ?: ಮಿಕ್ಕ ಸೀಟುಗಳು ಮಿತ್ರ ಪಕ್ಷಕ್ಕೆ? ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಗೆರೆಯ ಕುಮಾರ್: ನೆರವಿಗೆ ಬಂದ ಕೆಸಿಎಫ್ ಸೌದಿ… ಕೇರಳ ಬಿಜೆಪಿ ಸಿಎಂ ಕ್ಯಾಂಡಿಡೇಟ್: ಬಿಜೆಪಿ ಹೈಕಮಾಂಡ್ ಇನ್ನೂ ಘೋಷಣೆ ಮಾಡಿಲ್ವಂತೆ!

ಇತ್ತೀಚಿನ ಸುದ್ದಿ

ಕಂಕನಾಡಿ ನಗರ ಠಾಣೆ ನೂತನ ಕಟ್ಟಡಕ್ಕೆ ಹೆಚ್ಚುವರಿ ಅನುದಾನಕ್ಕೆ ಗೃಹ ಸಚಿವರಿಗೆ ಮನವಿ

August 12, 2020, 9:50 AM

ಮಂಗಳೂರು(reporterkarnataka news):

ಕಂಕನಾಡಿ ನಗರ ಪೋಲಿಸ್ ಠಾಣೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿ ಅನುದಾನ ಒದಗಿಸುವಂತೆ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳೂರಿಗೆ ಆಗಮಿಸಿದ್ದ ಗೃಹ ಸಚಿವರನ್ನು ಭೇಟಿ ಮಾಡಿದ ಶಾಸಕ ಕಾಮತ್, ಈಗಾಗಲೇ ಕಂಕನಾಡಿ ನಗರ ಪೊಲೀಸ್ ಠಾಣೆಯು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡ ತೀರ ಹಳೆಯದಾಗಿರುವ ಕಾರಣ ಸೋರುತ್ತಿದ್ದು ದಾಖಲೆಗಳನ್ನು ಸಂರಕ್ಷಿಸುವುದೂ ಕಷ್ಟಕರವಾಗಿದೆ. ಸ್ಥಳಾವಕಾಶದ ಕೊರತೆಯಿಂದ ಸಾರ್ವಜನಿಕರಿಗೆ ಹಾಗೂ  ಸಿಬ್ಬಂದಿಗಳಿಗೆ ವಾಹನ ನಿಲುಗಡೆ ಸಮಸ್ಯೆಯೂ ಇದೆ. 

ಪ್ರಸ್ತುತ ಪೊಲೀಸ್ ಇಲಾಖೆಗೆ ಸೇರಿದ ವಸತಿ ಗೃಹದ ಪಕ್ಕದಲ್ಲಿ ನೂತನ ಠಾಣೆಯನ್ನು ನಿರ್ಮಿಸಲು ಇಲಾಖೆಯಿಂದ 10 ಲಕ್ಷ ರೂಪಾಯಿ ಮಂಜೂರುಗೊಳಿಸಿ, ನಿರ್ಮಿತಿ ಕೇಂದ್ರದಿಂದ ಹೊಸ ಠಾಣೆಗೆ 2 ಅಂತಸ್ಥಿನ ಕಟ್ಟಡ ನಿರ್ಮಿಸಲಾಗಿದೆ. ಆ ನಂತರ ಅನುದಾನದ ಕೊರತೆಯಿಂದ ಕಾಮಗಾರಿ ಅರ್ದದಲ್ಲೇ ನಿಂತಿದ್ದು ಕಟ್ಟಡ ಪೂರ್ಣಗೊಳಿಸಲು ಹೆಚ್ಚುವರಿ 25 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ಹಾಗಾಗಿ ಪ್ರಥಮ ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆಗೊಳಿಸಬೇಕೆಂದು ಶಾಸಕ ಕಾಮತ್ ಗೃಹ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದರು.

ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ, ಬಿಜೆಪಿ ಮುಖಂಡ ಜಗದೀಶ್ ಶೇಣವ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು