ಇತ್ತೀಚಿನ ಸುದ್ದಿ
ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಕೇಂದ್ರ ಸರಕಾರ ವೈ ದರ್ಜೆಯ ಭದ್ರತೆ
September 7, 2020, 9:28 AM

ದೆಹಲಿ(reporterkarnataka news): ವಿವಾದಿತ ನಟಿ ಕಂಗನಾ ರಣಾವತ್ ಅವರಿಗೆ ವೈ ದರ್ಜೆಯ ಭದ್ರತೆ ನೀಡಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವಿನ ಬಳಿಕ ಹೋರಾಟಕ್ಕೆ ಧುಮುಕಿರುವ ಹಿನ್ನೆಲೆಯಲ್ಲಿ ನಟಿ ಕಂಗನಾ ರಣಾವತ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬಾಲಿವುಡ್ ನ ಖ್ಯಾತ ನಟ ನಟಿಯರನ್ನು ಗುರಿಯಾಗಿರಿಸಿ ಕಂಗನಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಸದ್ಯ ತವರು ರಾಜ್ಯದಲ್ಲಿರುವ ನಟಿ ಕಂಗನಾ ಶೀಘ್ರವೇ ಮುಂಬೈಗೆ ಮರಳುವುದಾಗಿ ಹೇಳಿದ್ದಾರೆ. ಮುಂಬೈ ಕುರಿತ ಅವರ ಹೇಳಿಕೆಗೆ ಕೂಡ ಶಿವಸೇನಾ ಅಪಸ್ವರ ಎತ್ತಿದೆ.