ಇತ್ತೀಚಿನ ಸುದ್ದಿ
ಮಂಜೇಶ್ವರ ಶಾಸಕರ ವಿರುದ್ದ ವಂಚನೆ ಆರೋಪ: ಇಂದು ಕ್ರೈಂ ಬ್ರಾಂಚ್ ಅಧಿಕಾರಿಗಳು ಕಾಸರಗೋಡಿಗೆ
September 14, 2020, 3:03 AM

ಕಾಸರಗೋಡು(reporterkarnataka news): ಮಂಜೇಶ್ವರ ಶಾಸಕ ಕಮರುದ್ದೀನ್ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಅಧಿಕಾರಿಗಳು ಇಂದು ಕಾಸರಗೋಡಿಗೆ ಆಗಮಿಸಲಿದ್ದಾರೆ. ಶಾಸಕ ಕಮರುದ್ದೀನ್ ವಿರುದ್ದ 42 ವಂಚನೆ ಪ್ರಕರಣ ದಾಖಲಾಗಿದೆ.
ಕಾಸರಗೋಡಿನ ಚಂದೇರಾ ಪೊಲೀಸ್ ಠಾಣೆಯಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ತನಿಖಾ ಅಧಿಕಾರಿಗಳು ಮೊದಲು ಚಂದೇರಾಕ್ಕೆ ಭೇಟಿ ನೀಡಲಿದ್ದಾರೆ. ಶಾಸಕರು ಪಾಲುದಾರಿಕೆ ಹೊಂದಿದ್ದ ಚಿನ್ನಾಭರಣ ಸಂಸ್ಥೆ ಜನರಿಂದ ಠೇವಣಿ ಪಡೆದು ಚಿನ್ನ ನೀಡಿಲ್ಲ ಎಂದು ಆರೋಪಿಸಲಾಗಿದೆ.