10:49 PM Thursday21 - January 2021
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ 5ನೇ ಪುಣ್ಯತಿಥಿ ಆಚರಣೆ ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ… ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಪ್ರಮಾಣ ವಚನ ಸ್ವೀಕಾರ: ಕಣ್ಣೀರು ಸುರಿಸಿದ… ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4…

ಇತ್ತೀಚಿನ ಸುದ್ದಿ

ಅತಿಕಾರಿಬೆಟ್ಟುನಲ್ಲಿ ಕೈಯಿಂದ ಕಮಲಕ್ಕೆ,ಕೆಮ್ರಾಲ್ ನಲ್ಲಿ  ಕಮಲದಿಂದ ಕೈಗೆ !

December 31, 2020, 9:26 AM

ಮುಲ್ಕಿ(reporterkarnataka news) : 

ಅತಿಕಾರಿಬೆಟ್ಟುನಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಅಧಿಕಾರ ಕಸಿದುಕೊಂಡಿದೆ. ಬಿಜೆಪಿ 9 ಸೀಟುಗಳನ್ನು, ಕಾಂಗ್ರೆಸ್ ಕೇವಲ ಒಂದು ಸೀಟು ಗಳಿಸಿದೆ. ಕೆಮ್ರಾಲ್ ನಲ್ಲಿ ಇದಕ್ಕೆ ವಿರುದ್ಧವಾಗಿ ಬಿಜೆಪಿಯ ಕೈಯಲ್ಲಿದ್ದ ಅಧಿಕಾರವನ್ನು ಕಾಂಗ್ರೇಸ್ ಕಸಿದುಕೊಂಡಿದೆ. ಕಾಂಗ್ರೆಸ್ 10, ಬಿಜೆಪಿ7 ಸೀಟುಗಳನ್ನು ಗಳಿಸಿದೆ.

ಐಕಳ ಪಂಚಾಯತ್ ನ ಎಲ್ಲಾ ಸೀಟುಗಳನ್ನು ಬಿಜೆಪಿ ಪಡೆದುಕೊಂಡು ಹೊಸ ಇತಿಹಾಸ ನಿರ್ಮಿಸಿದೆ. (ಬಿಜೆಪಿ 14. ಕಾಂಗ್ರೆಸ್ 0). ಹಳೆಯಂಗಡಿ ಪಂಚಾಯತ್ ನ ಒಟ್ಟು 22 ಸ್ಥಾನಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 11 ಸಮಬಲದಲ್ಲಿ ಜಯಗಳಿಸಿದ್ದು ಆಡಳಿತ ಡೋಲಾಯಮಾನ ಸ್ಥಿತಿಯಲ್ಲಿದ್ದು ಅಧಿಕಾರ ಯಾರಿಗೆ ಎಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪಡುಪಣಂಬೂರುನಲ್ಲಿ ಬಿಜೆಪಿ 15 ಸೀಟುಗಳನ್ನು ಗಳಿಸಿದೆ. ಕಾಂಗ್ರೆಸ್ ಕೇವಲ ಒಂದು ಸೀಟು ಗಳಿಸಿದೆ. ಕಿಲ್ಪಾಡಿಯಲ್ಲಿ ಬಿಜೆಪಿ 6 ಕಾಂಗ್ರೆಸ್ 3 ಸೀಟು ಗಳಿಸಿದೆ. ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದೆ. ಇಲ್ಲಿ ಬಿಜೆಪಿ ಬಂಡಾಯ ಯಾವ ಸಮಸ್ಯೆ ತಂದೊಡ್ಡಲ್ಲಿಲ್ಲ. ಬಳ್ಕುಂಜೆಯಲ್ಲಿ ಬಿಜೆಪಿ 8, ಕಾಂಗ್ರೆಸ್ 4 ಸೀಟುಗಳನ್ನು ಗಳಿಸಿದೆ ಬಿಜೆಪಿ ಅಧಿಕಾರಕ್ಕೆ ಏರಿದೆ.

ಇತ್ತೀಚಿನ ಸುದ್ದಿ

ಜಾಹೀರಾತು