ಇತ್ತೀಚಿನ ಸುದ್ದಿ
ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದೇವೆ: ಪ್ರಧಾನಿ ಮೋದಿ ಘೋಷಣೆ
November 14, 2020, 12:50 PM

ಜೈಸಲ್ಮೇರ್: ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಅದರದ್ದೇ ಆದ ಭಾಷೆಯಲ್ಲಿ ತಕ್ಕ ಉತ್ತರ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ರಾಜಸ್ತಾನದ ಜೈಸಲ್ಮೇರ್ ಮುಂಚೂಣಿ ಸೇನಾ ನೆಲೆಯಲ್ಲಿ ಅವರು ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶುಕ್ರವಾರ ಭಾರತ ನಡೆಸಿದ ಪ್ರತಿದಾಳಿಯಲ್ಲಿ 11 ಪಾಕ ಸೈನಿಕರು ಹತರಾಗಿದ್ದರು.
ಇದನ್ನು ಪ್ರಸ್ತಾಪಿಸಿದ ಪ್ರಧಾನಿ , ಪಾಕಿಸ್ತಾನದ ದುಸ್ಸಾಹಸಕ್ಕೆ ಸೂಕ್ತ ಉತ್ತರ ನೀಡಲಾಗಿದೆ ಎಂದು ಘೋಷಿಸಿದರು. ಯೋಧರ ಜತೆ ದೀಪಾವಳಿ ಆಚರಿಸಲು ಪ್ರಧಾನಿ ಜೈಸಲ್ಮೇರ್ ಗೆ ಭೇಟಿ ನೀಡಿದ್ದಾರೆ.