ಇತ್ತೀಚಿನ ಸುದ್ದಿ
20ರಂದು ಕಡಬದಲ್ಲಿ ಜಾಗೋ ಕಿಸಾನ್ ಅಭಿಯಾನಕ್ಕೆ ಚಾಲನೆ
October 19, 2020, 9:02 PM

ಮಂಗಳೂರು(reporterkarnatakanews):
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಜಾರಿಗೆ ತಂದ ಸ್ವತಂತ್ರ ಭಾರತದ ಅತ್ಯಂತ ಕರಾಳ ಕೃಷಿ ಕಾನೂನಿನ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) “ಜಾಗೋ ಕಿಸಾನ್” ಕೃಷಿ ಸಂಹಾರ ಬಿಜೆಪಿಯ ಹುನ್ನಾರ ಎಂಬ ಶೀರ್ಷಿಕೆಯಡಿ ದೇಶವ್ಯಾಪಿ ಅಭಿಯಾನವನ್ನು ಕೈಗೊಂಡಿದ್ದು, ಇದರ ಅಂಗವಾಗಿ ಎಸ್ ಡಿಪಿಐ ದ.ಕ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮ ಅಕ್ಟೋಬರ್ 20 ರಂದು ಕಡಬದಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 11 ಗೆಂಟೆಗೆ ಕಡಬ ತಹಶೀಲ್ದಾರ್ ಕಚೇರಿಯಿಂದ ಪಾದ ಯಾತ್ರೆ ನಡೆಯಲಿದ್ದು ಬಳಿಕ ಕಲಾರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಎಸ್ ಡಿಪಿಐ ರಾಜ್ಯ, ಜಿಲ್ಲಾ ನಾಯಕರು, ರೈತ ಸಂಘಟನೆಯ ಜಿಲ್ಲಾ ಮತ್ತು ರಾಜ್ಯ ನಾಯಕರು, ದಲಿತ ಸಂಘಟನೆಯ ಜಿಲ್ಲಾ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಜಾಗೋ ಕಿಸಾನ್ ಅಭಿಯಾನದ ಜಿಲ್ಲಾ ಉಸ್ತುವಾರಿ ಆಂಟನಿ ಪಿಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.