3:52 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಜ್ಯೋತಿಷ್ಯದ ಭವ್ಯ ಪರಂಪರೆಯನ್ನು ಶ್ರೇಷ್ಠತೆಗೆ  ಒಯ್ದ ಸುಬ್ರಾಯ ಪಂಡಿತ್ ಗೆ ನುಡಿ ನಮನ

December 25, 2020, 1:12 PM

ಮಂಗಳೂರು( reporterkarnataka news): ಜ್ಯೋತಿಷ್ಯದ ಭವ್ಯ ಪರಂಪರೆಯನ್ನು ಶ್ರೇಷ್ಠತೆಗೆ ಒಯ್ದು, ನೂರಾರು ಶಿಷ್ಯವೃಂದದ ಸೃಷ್ಟಿಗೆ ಕಾರಣರಾದ ಪ್ರಸಿದ್ಧ ಜ್ಯೋತಿಷಿ ಸುಬ್ರಾಯ ಪಂಡಿತ್ ಮಂಗಳಪೇಟೆ(81) ಇನ್ನು ನೆನಪು ಮಾತ್ರ.

ಹಿರಿಯ ಜ್ಯೋತಿಷಿಯಾದ ಅವರು ಸಾವಿರಾರು ಮಂದಿಗೆ ಮಾರ್ಗದರ್ಶನ ನೀಡಿದ್ದರು. ತಮ್ಮ ಮನೆಯಲ್ಲೇ ಹಲವು ಮಂದಿ ಆಕಾಂಕ್ಷಿಗಳಿಗೆ ಮೂರು ಹೊತ್ತಿನ ತುತ್ತಿನ ಜತೆಗೆ ಜ್ಯೋತಿಷ್ಯ ವಿದ್ಯೆಯನ್ನು ಧಾರೆ ಎರೆದಿದ್ದರು. ಸರಳ, ಸಜ್ಜನ, ಸಾತ್ವಿಕ ಸ್ವಭಾವದಿಂದಲೇ ಸುಬ್ರಾಯ ಪಂಡಿತ್ ಅವರು ಚಿರಪರಿಚಿತರಾಗಿದ್ದರು.

ಮಂಗಳಪೇಟೆ ಶಾರದಾ ಭಜನಾ ಮಂಡಳಿಯ ಗೌರವಾಧ್ಯಕ್ಷರಾಗಿದ್ದು, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅವರು ಪತ್ನಿ, ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು