ಇತ್ತೀಚಿನ ಸುದ್ದಿ
ಜೂಜು ಕೇಂದ್ರದ ಮೇಲೆ ಸಿಸಿಬಿ ದಾಳಿ: 65 ಮಂದಿ ವಶಕ್ಕೆ
October 11, 2020, 9:31 PM

ಬೆಂಗಳೂರು( reporterkarnataka news): ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಜೂಜು ಅಡ್ಡದ ಮೇಲೆ ದಾಳಿ ನಡೆಸಿದ್ದಾರೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. 80 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಜೂಜಾಟದಲ್ಲಿ ನಿರತರಾಗಿದ್ದ 65 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆದವರಲ್ಲಿ ಸಮಾಜದ ಕೆಲವು ಗಣ್ಯ ವ್ಯಕ್ತಿಗಳು ಕೂಡ ಇದ್ದಾರೆ ಎಂದು ವರದಿಯಾಗಿದೆ