ಇತ್ತೀಚಿನ ಸುದ್ದಿ
Job Alert : ಪಿಯುಸಿ ಮುಗಿಸಿದವರಿಗೆ ಇಲ್ಲಿದೆ ಭರ್ಜರಿ ಅವಕಾಶ
August 4, 2020, 4:31 AM

ನವದೆಹಲಿ(Reporterkarnataka News)
ನೀವು ಪಿಯುಸಿ ಮುಗಿಸಿ ಕೆಲಸವಿಲ್ಲದೆ ಇದ್ದೀರಾ .? ಇಲ್ಲಿದೆ ಭರ್ಜರಿ ಅವಕಾಶ. ದೆಹಲಿ ಪೊಲೀಸ್ ಇಲಾಖೆಯಲ್ಲಿ 5848 ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ನೀವು ಅರ್ಜಿ ಸಲ್ಲಿಸಬಹುದು.
ಹೌದು ದೆಹಲಿ ಪೊಲೀಸ್ ಸಂಸ್ಥೆಯಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಾನ್ಸ್ಟೆಬಲ್ ಹುದ್ದೆ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು 10+2 (ಪಿಯುಸಿ) ಶಿಕ್ಷಣ ಪೂರೈಸಿರಬೇಕು. ವಯೋಮಿತಿ ಕನಿಷ್ಠ 18 ವರ್ಷ, ಗರಿಷ್ಟ 25 ವರ್ಷ ಪೂರೈಸಿರಬೇಕು ಎಂಬ ನಿಯಮವಿದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿದ್ದು, . Physical Endurance and Measurement Test (PE&MT) ಇವು ಅರ್ಹತಾ ಪರೀಕ್ಷೆಯಾಗಿದ್ದು , . ವೇತನಶ್ರೇಣಿ 21,700/- ರಿಂದ 69,100/- ರೂ.
ಇರುತ್ತದೆ.
ದೆಹಲಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದು ದೆಹಲಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಅರ್ಹ ಅಭ್ಯರ್ಥಿಗಳು https://ssc.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್ 7 ರೊಳಗಾಗಿ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ https://bit.ly/2Pd3uPB ವೆಬ್ ಸೈಟ್ ನೋಡಬಹುದು.