ಇತ್ತೀಚಿನ ಸುದ್ದಿ
ಪತ್ರಕರ್ತ ಜಿನ್ನಪ್ಪರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಎಂದೋ ಸಿಗಬೇಕಿದ್ದ ಗೌರವ ತಡವಾಗಿ ಸಂದಾಯ
October 30, 2020, 10:42 PM

ಮಂಗಳೂರು(reporterkarnataka news):
ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪ ಸಂಪಾದಕರಾದ ಜಿನ್ನಪ್ಪ ಗೌಡ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
1992ರಲ್ಲಿ ಮುಂಗಾರು ಪತ್ರಿಕೆಯ ಮೂಲಕ ಪತ್ರಕರ್ತ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಕನ್ನಡ ಜನಾಂತರಂಗ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು. ಬಳಿಕ ಜನವಾಹಿನಿಯಲ್ಲಿ ಮುಖ್ಯ ಪುಟಗಳನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಅವರು ಹಲವು ವರ್ಷಗಳಿಂದ ವಿಜಯ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 26 ವರ್ಷಗಳಿಂದ ಅವರು ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.
ಸೌಮ್ಯ ಸ್ವಭಾವದ ಮಿತಭಾಷಿಯಾದ ಜಿನ್ನಪ್ಪ ಅವರು ಒಂದು ತುಂಬಿದ ಕೊಡ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತು. ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರ ಮಾಡುವುದರಲ್ಲಿ ನಿಸ್ಸೀಮರಾದ ಅವರು ವಾಣಿಜ್ಯ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ಅಪಾರ ಜ್ಞಾನ ಪಡೆದಿದ್ದಾರೆ. ನಿಜವಾಗಿ ಅವರಿಗೆ ಈ ಪ್ರಶಸ್ತಿ
ಎಂದೋ ಸಂದಾಯವಾಗಬೇಕಿತ್ತು. ಆದರೆ ಅತ್ತು ಕರೆದು ಪ್ರಶಸ್ತಿ ಗಿಟ್ಟಿಸುವ ಇಂದಿನ ಕಾಲದಲ್ಲಿ ನಿಜವಾದ ಅರ್ಹತೆ ಹೊಂದಿದ ಜಿನ್ಬಪ್ಪ ಅವರಿಗೆ ಕನಿಷ್ಠ 10 ವರ್ಷ ವಿಳಂಬವಾಗಿ ಪ್ರಶಸ್ತಿ ಬಂದಿದೆ.