7:42 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಜನವರಿ ಕೊನೆಯಿಂದ ಕರಾವಳಿಯ ಜನಪದ ಕ್ರೀಡೆ ಕಂಬಳ ಆರಂಭ: ಎಲ್ಲೆಲ್ಲಿ ಯಾವಾಗ?  ನೀವೇ ನೋಡಿ

January 5, 2021, 2:32 PM

ಮಂಗಳೂರು(reporterkarnataka news): ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ಸಿದ್ದಗೊಂಡಿದ್ದು,ಜ.31ರಿಂದ  ಮಾರ್ಚ್ 31 ರ ವರೆಗೆ ಏಳು ಕಂಬಳ ಓಟವನ್ನು ನಡೆಸಲು ನಿಧರಿಸಲಾಗಿದೆ.

ಈ ಕುರಿತು ಕಂಬಳದ ಸಂಘಟಕರು ಮತ್ತು ಮಾಲೀಕರ ನಡುವಿನ ವಾಷಿಕ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಇತರ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕಂಬಳವನ್ನು ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆ ಮೂಲಕ ಈ ಬಾರಿಯೂ ಕಂಬಳ ಪ್ರಿಯರ ಆಸೆಯನ್ನು ಈಡೇರಿಸುವ ಸಲುವಾಗಿ ಕಂಬಳದ ಆಯೋಜಕರು ಮಹತ್ವದ ಹೆಜ್ಜೆಯನ್ನು ಇರಿಸಿದ್ದಾರೆ.

ಕೊರೋನಾ ಹಿನ್ನೆಯಲ್ಲಿ ಪೂರಕ ಅಭ್ಯಾಸಗಳಿಗೆ ಸಮಯಾವಕಾಶ ದೊರೆಯದೇ ಇರುವ ಹಿನ್ನೆಲೆಯಲ್ಲಿ ಈ ವರೆಗೆ ತಮ್ಮ ಕೋಣಗಳನ್ನು ಕಂಬಳದ ಗದ್ದೆಗೆ ಇಳಿಸುತ್ತಿದ್ದ ಕೋಣಗಳ ಮಾಲಿಕರು ಕಂಬಳದಲ್ಲಿ ಭಾಗವಹಿಸುತ್ತಿಲ್ಲ ಎಂದು ಜಿಲ್ಲಾ ಕಂಬಳ ಸಮಿತಿಯು ಮಾಹಿತಿ ನೀಡಿದೆ. ಈ ಬಾರಿ ಕಂಬಳ ನಡೆಸುವುದಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳಿದ್ದ ಹಿನ್ನೆಲೆಯಲ್ಲಿ ವೇಳಾಪಟ್ಟಿ ಪ್ರಕಟಿಸುವುದು ಸಹ ವಿಳಂಬವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕೊರೋನಾ ಸಾಂಕ್ರಾಮಿಕ ಸೋಂಕು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡು ಕಂಬಳ ನಡೆಸಲಾಗುತ್ತದೆ ಎಂದು ಕಂಬಳ ಸಮಿತಿ ಮಾಹಿತಿಯನ್ನು ನೀಡಿದೆ. ಜೊತೆಗೆ ಕಂಬಳ ನಡೆಯುವಲ್ಲಿ ಜನಸಂದಣಿಯನ್ನು ತಪ್ಪಿಸುವ ಸಲುವಾಗಿ, ಕಂಬಳವನ್ನು ಆನ್‌ಲೈನ್ ಮೂಲಕ ನೇರಪ್ರಸಾರ ಮಾಡಲಾಗುತ್ತದೆ ಎಂದು ಸಮಿತಿ ತಿಳಿಸಿದೆ.

ವರ್ಷಂಪ್ರತಿ ಕಂಬಳವನ್ನು ಸಂಜೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಕಂಬಳವನ್ನು ಮುಂಜಾನೆ 7.30 ರಿಂದ ಸಂಜೆ 6 ರ ವರೆಗೆ ನಡೆಸಲಾಗುತ್ತದೆ ಎಂದು ಜಿಲ್ಲಾ ಕಂಬಳ ಸಮಿತಿ ಮಾಹಿತಿ ನೀಡಿದೆ. ಹೊಕ್ಕಡ್ಗೊಳಿಯಲ್ಲಿ ಜನವರಿ 30 ಮತ್ತು 31, ಐಕಳ ಭಾವದಲ್ಲಿ ಫೆಬ್ರವರಿ 6 ಮತ್ತು 7, ವಾಮಂಜೂರಿನ ತಿರುವೈಲುಗುತ್ತಿನಲ್ಲಿ ಫೆ. 13 ಮತ್ತು 14, ಮೂಡಬಿದ್ರೆಯಲ್ಲಿ ಫೆ.20, 21, ಮಿಯಾರಿನಲ್ಲಿ ಫೆ. 27, 28, ಬಂಗ್ರೆ ಕೂಳೂರಿನಲ್ಲಿ ಮಾರ್ಚ್ 6 ರಂದು ಕಂಬಳ ನಡೆಯಲಿದೆ. ಪೆರ್ಮುಂಡ ಮತ್ತು ವೇಣೂರಿನಲ್ಲಿ ಮಾರ್ಚ್ 20, 21 ರಂದು ಅಂತಿಮ ಪಂದ್ಯ ನಡೆಯಲಿದೆ ಎಂದು ಜಿಲ್ಲಾ ಕಂಬಳ ಸಮಿತಿ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು