ಇತ್ತೀಚಿನ ಸುದ್ದಿ
ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆ
January 18, 2021, 9:53 PM

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
info.reporterkarnataka@gmail.com
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜನವರಿ 27 ಹಾಗೂ 28ರಂದು ಜಿಲ್ಲೆಯ ಹಿರಿಯ ಸಾಹಿತಿಗಳಾದ ಡಾ.ವಿ .ಮುನಿವೆಂಕಟಪ್ಪ
ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ 19ನೇ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬಿಡುಗಡೆಯಾಯಿತು.
ವಿವಿಧ, ವಿಭಿನ್ನ ಗೋಷ್ಠಿಗಳು, ಉಪನ್ಯಾಸಗಳು, ರಾಜ್ಯದ ಕಲಬುರಗಿ, ಬೀದರ್, ಹಂಪಿ, ಬಳ್ಳಾರಿ, ಶಿವಮೊಗ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಉಪನ್ಯಾಸ ನೀಡಲು ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳ ಆಗಮನ,ಜಿಲ್ಲೆಯ ನಾಡು , ನುಡಿ, ಶಿಕ್ಷಣ, ಸಾಹಿತ್ಯ ಇತರೆ ಸಮಾಜ ಸೇವೆ ಸಲ್ಲಿಸಿದವರಿಗೆ ಗೌರವ ಸಮರ್ಪಣೆ, ಜಿಲ್ಲೆಯ ಹಿರಿಯ ಕವಿಗಳಿಂದ ಕವಿಗೋಷ್ಠಿ,ಡಾ.ಗಿರೀಶ್ ಕಾರ್ನಾಡ್ ರಚಿಸಿದ ತುಘಲಕ್ ನಾಟಕ ನಡೆಯಲಿದೆ.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾಧ್ಯಕ್ಷರಾದ ಡಾ.ನಾಗಾನಂದ ಕೆಂಪರಾಜ್ , ಜಿಲ್ಲಾ ಗೌರವ ಕೋಶಾಧ್ಯಕ್ಷ ರತ್ನಪ್ಪ ಮೇಲಾಗಣಿ , ಗೌರವ ಸಲಹೆಗಾರರಾದ ಎಸ್ .ಮುನಿಯಪ್ಪ , ಡಾ ಕೆ ಎಂ ಜೆ ಮೌನಿ , ನರಸಿಂಹಯ್ಯ , ಬಸವರಾಜ್ ಚೀಲಕಾಂತ್ ಮಠ್ , ಬಿ.ಆರ್.ಶ್ರೀನಿವಾಸ ಮೂರ್ತಿ , ರಾಜೇಂದ್ರಾಚಾರಿ ತಾಲ್ಲೂಕು ಗೌರವಾಧ್ಯಕ್ಷ ಪರಮೇಶ್ವರನ್ , ಹುತ್ತೂರು ಹೋಬಳಿ ಅಧ್ಯಕ್ಷ ಎಸ್ ಸಿ ವೆಂಕಟಕೃಷ್ಣಪ್ಪ , ನಗರಾಧ್ಯಕ್ಷ ಬಿ.ಶಿವಕುಮಾರ್ , ಮಂಜುನಾಥ್ , ಬಿ ಆರ್ ರವೀಂದ್ರ ಭಾಗವಹಿಸಿದ್ದರು.