ಇತ್ತೀಚಿನ ಸುದ್ದಿ
ಜಮೀನು ಕಬಳಿಸಿದ ಆರೋಪ: ದೇವಸ್ಥಾನದ ಅರ್ಚಕನನ್ನು ಬೆಂಕಿ ಹಚ್ಚಿ ಹತ್ಯೆ
October 9, 2020, 12:45 PM

ಜೈಪುರ: ರಾಜಸ್ತಾನದ ಕಕೌಲಿ ಎಂಬಲ್ಲಿ ದೇವಸ್ಥಾನಕ್ಕೆ ಸೇರಿದ ಜಮೀನು ಕಬಳಿಸಲು ಅರ್ಚಕರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
ಕಕೌಲಿ ಎಂಬಲ್ಲಿರುವ ದೇವಸ್ಥಾನಕ್ಕೆ ಭಾರೀ ಬೆಲೆ ಬಾಳುವ ಭೂಮಿ ಇದೆ. ಇದರ ಮೇಲೆ ಕಣ್ಣಿಟ್ಟಿದ್ದ ಸ್ಥಳೀಯ ಮುಖಂಡನೊಬ್ಬ ಮೊದಲಿಗೆ ಅರ್ಚಕರ ಮೇಲೆ ಒತ್ತಡ ಹೇರಿದ್ದ. ಇದಕ್ಕೆ ಅವರು ಒಪ್ಪದಿದ್ದಾಗ ಅರ್ಚಕರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.