ಇತ್ತೀಚಿನ ಸುದ್ದಿ
ಜಾರಿಯಾಗುವ ಮುನ್ನವೇ ನೈಟ್ ಕರ್ಫ್ಯೂ ವಾಪಸ್ ಪಡೆದ ರಾಜ್ಯ ಯಡಿಯೂರಪ್ಪ ಸರಕಾರ
December 24, 2020, 5:49 PM

ಬೆಂಗಳೂರು(reporterkarnataka news);
ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಜಾರಿಗೊಳಿಸಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ವನ್ನು
ಜಾರಿಯಾಗುವ ಮುನ್ನವೇ ರದ್ದುಪಡಿಸಲಾಗಿದೆ. ರಾಜ್ಯ ಸರಕಾರ ಈ ಕುರಿತು ಆದೇಶವನ್ನು ವಾಪಸ್ ಪಡೆದಿದೆ ಎಂದು ತಿಳಿದು ಬಂದಿದೆ.
ಇಂದಿನಿಂದ(ಡಿ.24)ಯಿಂದ ಜನವರಿ 2ರ ವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿತ್ತು. ಇದಕ್ಕೆ ಮುನ್ನ ಬುಧವಾರದಂದು ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 23ರಿಂದಲೇ ಕರ್ಫ್ಯೂ ಜಾರಿ ಎಂದಿದ್ದರು. ಸಂಜೆಯಾಗುತ್ತಲೇ ತೀರ್ಮಾನ ಬದಲಾಯಿಸಿದ ಸರಕಾರ 24ರಿಂದ ಜಾರಿಗೊಳಿಸಲು ನಿರ್ಧರಿಸಿತ್ತು. ಇದೀಗ ಜಾರಿಯಾಗುವ ಮುನ್ನವೇ ಕರ್ಫ್ಯೂ ವಾಪಸ್ ಪಡೆಯಲಾಗಿದೆ.