8:35 AM Wednesday20 - January 2021
ಬ್ರೇಕಿಂಗ್ ನ್ಯೂಸ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ…

ಇತ್ತೀಚಿನ ಸುದ್ದಿ

ಜ.15ರಂದು ಕನಸು ಮಾರಾಟಕ್ಕಿದೆ ಕನ್ನಡ ಚಿತ್ರ ಓಟಿಟಿ “ಟಾಕೀಸ್‌”ನಲ್ಲಿ ರಿಲೀಸ್

January 5, 2021, 11:24 AM

ಮಂಗಳೂರು (Reporter Karnataka News)

ಶ್ರೀ ಪಾಷಾಣಮೂರ್ತಿ ಕ್ರಿಯೇಶನ್ಸ್ ಅರ್ಪಿಸುವ ಸ್ಮಿತೇಶ್ ಎಸ್. ಬಾರ್ಯ ನಿರ್ದೇಶನದ ಕನಸು ಮಾರಾಟಕ್ಕಿದೆ ಸಿನೆಮಾ ಟಾಕೀಸ್ ಓಟಿಟಿ ಆ್ಯಪ್‌ನಲ್ಲಿ ಜ.15ಕ್ಕೆ ಬಿಡುಗಡೆಯಾಗಲಿದೆ ಎಂದು ಅನೀಶ್ ಪೂಜಾರಿ ಹೇಳಿದರು.
ಬುಧವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು,
ಶಿವಕುಮಾರ್ ಸಿನಿಮಾ ನಿರ್ಮಿಸಿದ್ದು, ಶರತ್ ಕುಮಾರ್, ಪ್ರಶಾಂತ್ ಕೋಟ್ಯಾನ್, ಸೆಲ್ವರಾಜ್ ಸಹ ನಿರ್ಮಾಪಕರಾಗಿದ್ದಾರೆ. ನವೀನ್ ಪೂಜಾರಿ ಅವರು ಬರೆದ ಕಥೆಗೆ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ ಎಂದು ತಿಳಿಸಿದರು.
ಪ್ರಜ್ಞೇಶ್ ಶೆಟ್ಟಿ ಹಾಗೂ ಸ್ವಸ್ತಿಕಾ ಪೂಜಾರಿ ಮುಖ್ಯ ಭೂಮಿಕೆಯಲ್ಲಿದ್ದು, ಕಾಮಿಡಿ ಕಿಲಾಡಿಯ ಗೋವಿಂದೆ ಗೌಡ, ಧೀರಜ್ ನೀರ್ಮಾರ್ಗ ಮತ್ತಿತರರು, ಸಿದ್ಲಿಂಗು ಶ್ರೀಧರ್, ಚೇತರ್ ರೈ ಮಾಣಿ, ಮೋಹನ್ ಶೇಣಿ, ದೀಕ್ಷಿತ್ ಅಂಡಿಂಜೆ ಮತ್ತಿತರರು ತೆರೆ ಹಂಚಿಕೊಂಡಿದ್ದಾರೆ.
ಕವಿರಾಜ್, ಭರಾಟೆ ಚೇತನ್, ಸಾಹಿತಿ ಡಾ.ನಾಗೇಂದ್ರ ಪ್ರಸಾದ್, ಸುಕೇಶ್, ರೆಮೋ ಸಾಹಿತ್ಯ ನೀಡಿದ್ದಾರೆ. ಮಾನಸ ಹೊಳ್ಳ ಅವರು ಸಂಗೀತ ನಿರ್ದೇಶನ ಮಾಡಿದ್ದು, ವಿಜಯ್ ಪ್ರಕಾಶ್, ವಾಣಿ ಹರಿಕೃಷ್ಣ, ರಾಜೇಶ್ ಕೃಷ್ಣನ್, ಶಶಾಂಕ್, ಶೇಷಗಿರಿ, ಶ್ರೀ ಹರ್ಷ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ದಕ್ಷಿಣ ಕನ್ನಡ, ಹಾಸನ ಹಾಗೂ ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದ ಟಿಕೇಟ್ ಮೊತ್ತದಲ್ಲಿ ಒಂದು ಪಾಲು ಜನಸ್ನೇಹಿ ಚಾರಿಟಬಲ್ ಟ್ರಸ್ಟ್‌ಗೆ ನೀಡಲಾಗುತ್ತಿದೆ, ಚಿತ್ರದ ಟೈಟಲ್‌ಗೆ ಪೂರಕವಾದ ಕೆಲಸವನ್ನು ತಂಡ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಜ್ಞೇಶ್ ಶೆಟ್ಟಿ, ಸ್ವಸ್ತಿಕ ಪೂಜಾರಿ, ಛಾಯಾಗ್ರಾಹಕ ಸಂತೋಷ್ ಆಚಾರ್ಯ ಗುಂಪಲಾಜೆ, ದೀಕ್ಷಿತ್ ಪೂಜಾರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು