ಇತ್ತೀಚಿನ ಸುದ್ದಿ
ಐಪಿಎಲ್ ಪಂದ್ಯ: ದುಬೈಗೆ ತೆರಳಿದ ಚೆನ್ನೈ ಸೂಪರ್ ಕಿಂಗ್ಸ್, ಧೋನಿ ಪಯಣ
August 21, 2020, 10:17 AM

ಚೆನ್ನೈ(reporterkarnataka news): ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಇಂದು ದುಬೈಗೆ ತೆರಳಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇತರ ಸದಸ್ಯರು ಕೂಡ ಅವರ ಜತೆ ದುಬೈಗೆ ಹಾರಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದ ಮೂಲಕ ಅವರು ಪ್ರಯಾಣ ಬೆಳೆಸಿದರು.
ಚೆನ್ನೈನಲ್ಲಿ ಅಭ್ಯಾಸ ಪಂದ್ಯ ಮುಗಿಸಿರುವ ತಂಡದ ಆಟಗಾರರು ದುಬೈನಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಮೊದಲು ಕ್ವಾರಂಟೈನ್ ಗೆ ಗುರಿಯಾಗಲಿದ್ದಾರೆ. ಬಳಿಕ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಇದರಲ್ಲಿ ನೆಗೆಟಿವ್ ಬಂದರೆ ಮಾತ್ರ ಆಡಲು ಅವಕಾಶ ದೊರೆಯಲಿದೆ.
ಸಪ್ಟೆಂಬರ್ 19ರಿಂದ ನವೆಂಬರ್ 10ರ ತನಕ ಯು ಎ ಇ ಯಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ.