ಇತ್ತೀಚಿನ ಸುದ್ದಿ
ಐಪಿಎಲ್ ಬೆಟ್ಟಿಂಗ್ ಜಾಲ ಬಯಲು: ದೇಶವ್ಯಾಪಿ ಶೋಧ, ಮಂಗಳೂರಿನಲ್ಲಿಯೂ ಬೆಟ್ಟಿಂಗ್ ?
October 12, 2020, 8:11 AM

ನವದೆಹಲಿ(reporterkarnataka news): ಬೃಹತ್ ಐಪಿಎಲ್ ಬೆಟ್ಟಿಂಗ್ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ದೆಹಲಿಯಲ್ಲಿ ಪ್ರಕರಣ ಸಂಬಂಧ 17 ಮಂದಿಯನ್ನು ಬಂಧಿಸಲಾಗಿದೆ. ಗೋವಾ ಮತ್ತು ಜೈಪುರದಲ್ಲಿ ಹಲವು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಐಪಿಎಲ್ ಕ್ರೀಡಾಕೂಟ ಆರಂಭವಾಗಿ ಇದೀಗ ನಿರ್ಣಾಯಕ ಹಂತ ತಲುಪಿರುವ ಹಿನ್ನೆಲೆಯಲ್ಲಿ ಬೆಟ್ಟಿಂಗ್ ಜಾಲ ಸಕ್ರಿಯವಾಗಿದೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಮಂಗಳೂರು, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಐಪಿಎಲ್ ಬೆಟ್ಟಿಂಗ್ ಸಕ್ರಿಯವಾಗಿದೆ ಎಂಬ ಮಾತು ಕೇಳಿ ಬಂದಿದೆ.