ಇತ್ತೀಚಿನ ಸುದ್ದಿ
20ನೇ ದಿನಕ್ಕೆ ಕಾಲಿರಿಸಿದ ರೈತರ ಪ್ರತಿಭಟನೆ:ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರದ ಬೆಂಬಲ
December 15, 2020, 9:22 AM

ನವದೆಹಲಿ(reporterkarnataka news): ಕೇಂದ್ರದ ಕೃಷಿ ನೀತಿ ವಿರೋಧಿಸಿ ರೈತರು ದೆಹಲಿ ಹೊರವಲಯದಲ್ಲಿ ನಡೆಸುತ್ತಿರುವ ಪ್ರತಿಭಟನೆ 20ನೇ ದಿನಕ್ಕೆ ಕಾಲಿರಿಸಿದೆ. ಇದೇ ವೇಳೆ ರೈತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ರೈತ ಮುಖಂಡರ ಜತೆ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ದವಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.. ಕಾನೂನು ರದ್ದುಪಡಿಸುವುದನ್ನು ಬಿಟ್ಟು ಇತರ ಸಲಹೆಗಳ ಬಗ್ಗೆ ಪರಿಶೀಲಿಸಲು ಸಿದ್ದವಿರುವುದಾಗಿ ಸರ್ಕಾರ ಹೇಳಿದೆ.