ಇತ್ತೀಚಿನ ಸುದ್ದಿ
ಇಂತಹ ನಿರ್ಧಾರವನ್ನು ಖಂಡಿತವಾಗಿಯೂ ಧರ್ಮೇಗೌಡರಲ್ಲಿ ನಿರೀಕ್ಷಿಸಿಲ್ಲ; ಪ್ರತಾಪಚಂದ್ರ ಶೆಟ್ಟಿ
December 29, 2020, 11:55 AM

ಉಡುಪಿ(reporterkarnataka news):
ಧರ್ಮೇಗೌಡ ಅವರು ವಿಧಾನ ಪರಿಷತ್
ಉಪ ಸಭಾಪತಿಯಾದ ನಂತರ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೆ. ತುಂಬಾ ಸೌಮ್ಯ ಸ್ವಭಾವದವರು. ಆದರೆ ಈ ನಿರ್ಧಾರವನ್ನು ಖಂಡಿತ ನಿರೀಕ್ಷೆ ಮಾಡಿರಲಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹೇಳಿದ್ದಾರೆ.
ಅವರು ಸೂಕ್ಷ್ಮ ಮನಸ್ಸಿನ ಸಂವೇದನಶೀಲ ವ್ಯಕ್ತಿ.
ಪರಿಷತ್ ನ ಕಾರ್ಯ ಕಲಾಪದ ಬಗ್ಗೆ ಯಾವುದೇ ಗೊಂದಲಗಳಿದ್ದಾಗ ಚರ್ಚೆ ಮಾಡುತ್ತಿದ್ದೆವು. ಅವರು ಕೂಡಾ ಸಮಿತಿಯಲ್ಲಿ ಚರ್ಚಿಸುತ್ತಿದ್ದರು ಎಂದು ಪ್ರತಾಪ್ ಚಂದ್ರ ಶೆಟ್ಟಿ ತಿಳಿಸಿದ್ದಾರೆ.
ಎಸ್.ಎಲ್. ಧರ್ಮೇಗೌಡ ಅವರ ನಿಧನದ ಸುದ್ದಿ ರಾಜಕೀಯ ವಲಯದಲ್ಲಿ ಆಘಾತ ಉಂಟು ಮಾಡಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರು ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.