ಇತ್ತೀಚಿನ ಸುದ್ದಿ
ಭಾರತ- ಚೀನಾ ಗಡಿ ತಂಟೆ: ವಿದೇಶಾಂಗ ಸಚಿವರ ಮಾತುಕತೆಯಲ್ಲಿ ಶಾಂತಿ ಮಂತ್ರ
September 11, 2020, 3:21 AM

ಮಾಸ್ಕೋ:(reporter Karnataka NeWS)
ಭಾರತ- ಚೀನಾ ಗಡಿಯಲ್ಲಿ ಉದ್ವಿಗ್ನತೆ ನಿವಾರಿಸುವತ್ತ ಭಾರತ ಮತ್ತು ಚೀನಾ ಹೆಜ್ಜೆ ಇಟ್ಟಿದೆ. ಮಾಸ್ಕೊದಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಯಲ್ಲಿ ಶಾಂತಿ ಮಂತ್ರದ ಧ್ವನಿ ಕೇಳಿ ಬಂದಿದೆ.
ಭಾರತದ ಪರವಾಗಿ ವಿದೇಶಾಂಗ ಸಚಿವ ಜೈ ಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಚೀನಾವನ್ನು ಪ್ರತಿನಿಧಿಸಿದ್ದರು. ಗಡಿಯಲ್ಲಿ ಚೀನಾ ಸೇನಾ ಜಮಾವಣೆ ಮಾಡುವುದನ್ನು ತಕ್ಷಣ ಕೊನೆಗೊಳಿಸಬೇಕು ಎಂದು ಭಾರತ ಆಗ್ರಹಿಸಿದೆ. ಗಡಿಯಲ್ಲಿ ಯಾವುದೇ ಪ್ರಚೋದನಾಕಾರಿ ಕೃತ್ಯಕ್ಕೆ ಮುಂದಾಗದಂತೆ ಕೂಡ ಭಾರತ ಸೂಚಿಸಿದೆ.