8:43 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಇಂದಿನಿಂದ ಮಂಗಳೂರಿನಲ್ಲಿ ಬಹುಭಾಷ ರಂಗಹಬ್ಬ -3 : ಕ್ರಿಸ್‌ಮಸ್ ಕುಶ್ವಾರ್‌ನಿಂದ ಕಟ್ಟಿದ ಅಸ್ತಿತ್ವದ ಕೊಂಕಣಿ ನಾಟಕ ಜ.17ರಂದು ಪ್ರದರ್ಶನ

January 11, 2021, 2:39 AM

ಮಂಗಳೂರು (Reporter Karnataka News)
ಮಂಗಳೂರಿನಲ್ಲಿ ಮತ್ತೆ ರಂಗಹಬ್ಬ ಆರಂಭಗೊಂಡಿದೆ. ಅಸ್ತಿತ್ವ, ಪಾದುವ ರಂಗ ಅಧ್ಯಯನ ಕೇಂದ್ರ ಹಾಗೂ ಅರೆಹೊಳೆ ಪ್ರತಿಷ್ಠಾನ ಸಹಯೋಗದಲ್ಲಿ ಜ.11ರಿಂದ ಜ.17ರವರೆಗೆ ಪಾದುವ ಕಾಲೇಜ್‌ನ ಥೀಯೇಟರ್ ಹಬ್‌ನಲ್ಲಿ ನಡೆಯಲಿದೆ.

ಕೋವಿಡ್ ಮಹಾಮಾರಿ ಕಲಾವಿದರ ಬದುಕನ್ನೆ ಸ್ತಬ್ದಗೊಳಿಸಿತ್ತು. ನಾಟಕವಿಲ್ಲದೆ ಪ್ರದರ್ಶನವಿಲ್ಲದೆ ಇರುವ ಸಂದರ್ಭದಲ್ಲಿ ಮಂಗಳೂರಿನ ಹವ್ಯಾಸಿ ರಂಗ ತಂಡವೊಂದು ಕ್ರಿಸ್ಮಸ್ ಸಮಯದಲ್ಲಿ ಕುಸ್ವಾರ್ ಮಾರಿ ಹಣ ಸಂಗ್ರಹಿಸಿ ನಾಟಕವೊಂದನ್ನು ಕಟ್ಟಿದ್ದು, ಜ.17ರ ಭಾನುವಾರ ಪ್ರದರ್ಶನಗೊಳ್ಳಲಿದೆ.
ಹೌದು, ಮಂಗಳೂರಿನ ಯುವಕರು ಕಟ್ಟಿಕೊಂಡ ಈ ತಂಡ ಅನೇಕ ರಂಗ ಕಾರ್ಯಗಳ ಜತೆಗೆ ವಿಶೇಷ ಕಾರ್ಯಾಗಾರ ಹಾಗೂ ಶಿಬಿರಗಳನ್ನು ಆಯೋಜಿಸಿಕೊಂಡು ಕಳೆದ ಐದು ವರ್ಷಗಳಿಂದ ಸಕ್ರಿಯವಾಗಿದೆ.
ಇದೀಗ ಈ ತಂಡದಿಂದ ಹೊಸ ಪ್ರಯೋಗ ನಡೆಯುತ್ತಿದ್ದು, ಮಂಗಳೂರು ವಿವಿಯ ಪದವಿಯ ಕೊಂಕಣಿ ಪಠ್ಯವನ್ನೆ ನಾಟಕವನ್ನಾಗಿ ಪ್ರದರ್ಶನಗೊಳಿಸಲು ಅಣಿಯಾಗಿದೆ. ನುರಿತ ರಂಗ ಕಲಾವಿದ ಕ್ರಿಸ್ಟೋಫರ್ ನೀನಾಸಂ ಮಾರ್ಗದರ್ಶನದಲ್ಲಿ ಕಟ್ಟಿದ ಆಮಿ ಪಯ್ಣಾರಿ ನಾಟಕ ರಂಗಹಬ್ಬದಲ್ಲಿ ಪ್ರದರ್ಶನಗೊಳ್ಳಲಿದೆ.
ಎಲ್ಲಾ ನಾಟಕಗಳಿಗೂ ಪ್ರವೇಶ ಉಚಿತ ಎಂದು ಪ್ರಕಟಣೆ ತಿಳಿಸಿದೆ.

ಬಹುಭಾಷ ರಂಗಹಬ್ಬ 3ರಲ್ಲಿ ಪ್ರದರ್ಶನವಾಗುವ ನಾಟಕಗಳು

ದಿನಾಂಕ: 11-01-2021 (ಸೋಮವಾರ)
ನಾಟಕ: ಸಾಹೇಬ್ರು ಬಂದವೇ…!!
ಭಾಷೆ: ಅರೆಭಾಷೆ
ನಿರ್ದೇಶನ: ಜೀವನ್ ರಾಮ್ ಸುಳ್ಯ

————————————–

ದಿನಾಂಕ: 16-01-2021 (ಶನಿವಾರ)
ನಾಟಕ: ಬಿದ್ದೂರಿನ ಬಿಗ್ ಬಿನ್
ಭಾಷೆ: ಕನ್ನಡ
ತಂಡ: ರಂಗಪಯಣ, ಬೆಂಗಳೂರು
ರಚನೆ: ಶ್ರೀನಿವಾಸ ವೈದ್ಯ
ರಂಗರೂಪ, ನಿರ್ದೇಶನ: ರಾಜ್ ಗುರು

————————————–

ದಿನಾಂಕ: 17-01-2021 (ಭಾನುವಾರ)
ನಾಟಕ: ಆಮಿ ಪಯ್ಣಾರಿ
(ಕೊಂಕಣಿ ಪದವಿ ಶಿಕ್ಷಣ ಪಠ್ಯ ಪುಸ್ತಕದ ರಂಗರೂಪ)
ಭಾಷೆ: ಕೊಂಕಣಿ
ತಂಡ: ಅಸ್ತಿತ್ವ (ರಿ.) ಮಂಗಳೂರು
ವಿನ್ಯಾಸ: ಕ್ರಿಸ್ಟಿ

ಇತ್ತೀಚಿನ ಸುದ್ದಿ

ಜಾಹೀರಾತು