ಇತ್ತೀಚಿನ ಸುದ್ದಿ
ಹೈದರಾಬಾದ್ ಪಾಲಿಕೆ ಚುನಾವಣೆ : ಮತದಾನ ಆರಂಭ, 1122 ಅಭ್ಯರ್ಥಿಗಳು ಕಣದಲ್ಲಿ
December 1, 2020, 9:37 AM

ಹೈದರಬಾದ್(reporterkarnataka news): ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಆರಂಭವಾಗಿದೆ.
ಒಟ್ಟು 150 ವಾರ್ಡ್ ಗಳಿದ್ದು, 1122 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ‘ಟಿಆರ್ ಎಸ್ ಮತ್ತು ಬಿಜೆಪಿ ಮಧ್ಯೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.
ರಾಜ್ಯದ ಆರೋಗ್ಯ ಸಚಿವ ಡಾ. ಸುಧಾಕರ್ ಬಿಜೆಪಿಯ ಚುನಾವಣೆಯ ಉಸ್ತುವಾರಿಯಾಗಿದ್ದರು. ಸಂಸದ ತೇಜಸ್ವಿ ಸೂರ್ಯ ಕೂಡ ಪ್ರಚಾರ ನ಼ಡೆಸಿದ್ದರು.