ಇತ್ತೀಚಿನ ಸುದ್ದಿ
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಯಾರಿಗೂ ಬಹುಮತವಿಲ್ಲ, ಟಿಆರ್ ಎಸ್ ಅತೀ ದೊಡ್ಡ ಪಕ್ಷ
December 4, 2020, 10:23 PM

ಹೈದರಾಬಾದ್(reporterkarnataka news): ವಿಧಾನಸಭೆ ಚುನಾವಣೆ ರೀತಿಯ ಕುತೂಹಲ ಕೆರಳಿಸಿದ್ದ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. 150 ಸ್ಥಾನಗಳ ಪೈಕಿ ಆಡಳಿತಾ ರೂಢ ಟಿಆರ್ ಎಸ್ 56 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಸಂಸದ ಒವೈಸಿ ನೇತೃತ್ವದ ಎಂಐಎಂ 43 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ.ಬಿಜೆಪಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತ ಪೂರ್ವ ಸಾಧನೆ ಮೆರೆದಿದೆ. ಎರಡನೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 49 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಕಳೆದ ಬಾರಿ ಬಿಜೆಪಿ ಕೇವಲ 4 ಸದಸ್ಯರನ್ನು ಮಾತ್ರ ಹೊಂದಿತ್ತು.