ಇತ್ತೀಚಿನ ಸುದ್ದಿ
ಹೈದರಾಬಾದ್ ಮಹಾನಗರಪಾಲಿಕೆ ಚುನಾವಣೆ: ಟಿಆರ್ ಎಸ್ ಮುನ್ನಡೆ, ಒವೈಸಿ ದ್ವಿತೀಯ
December 4, 2020, 4:41 PM

ಹೈದರಾಬಾದ್(reporterkarnataka news): ಮುತ್ತಿನ ನಗರಿ ಹೈದರಾಬಾದ್ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಮತ ಎಣಿಕೆ ಮುಂದುವರಿದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಆಡಳಿತಾ ರೂಢ ಟಿಆರ್ ಎಸ್ 62 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಒವೈಸಿ ನೇತೃತ್ವದ ಎಐಎಂಐಎಂ 31 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿ 22 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
150 ವಾರ್ಡ್ ಗಳನ್ನು ಮಹಾನಗರ ಪಾಲಿಕೆ ಹೊಂದಿದೆ. ಚುನಾವಣೆಯಲ್ಲಿ ಅತ್ಯಧಿಕ ಕಡಿಮೆ ಮತದಾನವಾಗಿತ್ತು.