ಇತ್ತೀಚಿನ ಸುದ್ದಿ
ಹೊಸ್ಮಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಐಒಸಿಎಲ್ ನಿಂದ ಶೌಚಾಲಯ ಕೊಡುಗೆ
October 2, 2020, 2:25 PM

ಹೊಸ್ಮಾರು(reporterkarnataka news): ಹೊಸ್ಮಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್) ಕೊಡುಗೆಯಾಗಿ ನೀಡಿದ ಸುಸಜ್ಜಿತವಾದ ಬಾಲಕಿಯರ ಶೌಚಾಲಯವನ್ನು ಉದ್ಘಾಟಿಸಲಾಯಿತು.
ಕೆಐಒಸಿಎಲ್ ಉತ್ಪಾದನೆ ಮತ್ತು ಯೋಜನೆ ನಿರ್ದೇಶಕ ಭಾಸ್ಕರ ರೆಡ್ಡಿ ಅವರು ಕಟ್ಟಡವನ್ನು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು.
ಎ.ವಿ. ಶ್ರೀನಿವಾಸ್ ಭಟ್( ಮಹಾ ಪ್ರಬಂಧಕರು ಕೆಐಒಸಿಎಲ್ ಮಂಗಳೂರು), ಮನೋಹರ್ (ಡಿಜಿಎಂ ಮಂಗಳೂರು) ಉಪಸ್ಥಿತರಿದ್ದರು. ಇಂಜಿನಿಯರ್ ಮನೋಹರ್ ಹಾಗೂ ಗುತ್ತಿಗೆದಾರರಾದ ನಾರಾಯಣ ಸುವರ್ಣ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪ ಪ್ರಾಂಶುಪಾಲರಾದ ದಿವಾಕರ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವಿಸಿದ್ದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಪ್ರಭಾವತಿ ಶಾಲೆಯ ವತಿಯಿಂದ ಸಂಸ್ಥೆಗೆ ನೆನಪಿನ ಕಾಣಿಕೆ ನೀಡಿದರು.
ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ, ಮಾಜಿ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ ರಾವ್, ಎಪಿಎಂಸಿ ಸದಸ್ಯರಾದ ಜಯವರ್ಮ ಜೈನ್, ಎಸ್ ಡಿಎಂಸಿ ಅಧ್ಯಕ್ಷ ಸುಜಯ, ಸದಾನಂದ ಪೂಜಾರಿ ಹಾಗೂ ಶಿಕ್ಷಕ ವೃಂದದವರು ಸಭೆಯಲ್ಲಿ ಭಾಗವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣ ಕುಮಾರ್ ವಂದಿಸಿದರು.