ಇತ್ತೀಚಿನ ಸುದ್ದಿ
ಹೊಸ ವರ್ಷದ ಸಂಭ್ರಮಾಚರಣೆ: ಗೋವದತ್ತ ಮುಖ ಮಾಡಿದ ರಾಜ್ಯದ ಜನತೆ
December 31, 2020, 2:23 PM

ಬೆಂಗಳೂರು(reporterkarnataka news): ಕೊರೊನ ಮಹಾಮಾರಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಪಾರ್ಟಿ ಪ್ರಿಯರು ಗೋವದತ್ತ ತೆರಳಿದ್ದಾರೆ.
ಹುಬ್ಬಳ್ಳಿ, ಬೆಳಗಾವಿ ಮತ್ತು ರಾಜ್ಯದ ಇತರ ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗೋವಕ್ಕೆ ಭೇಟಿ ನೀಡಿದ್ದಾರೆ. ಗೋವಾದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಾನೂನಿನಲ್ಲಿ ಸ್ವಲ್ಪ ರಿಯಾಯಿತಿ ನೀಡಲಾಗಿದೆ.