ಇತ್ತೀಚಿನ ಸುದ್ದಿ
ಹೊಸ ವರ್ಷದ ಎಲ್ಲ ವಿಶೇಷ ಕಾರ್ಯಕ್ರಮಗಳಿಗೆ ನಿಷೇಧ: ಸರಕಾರದ ಮಾರ್ಗಸೂಚಿ ಪ್ರಕಟ
December 27, 2020, 5:20 PM

ಬೆಂಗಳೂರು( reporterkarnataka news): ಹೊಸ ವರ್ಷ ಆಚರಣೆ ಕುರಿತಂತೆ ಸರಕಾರ ಮಾರ್ಗಸೂಚಿ ಹೊರಡಿಸಿದ್ದು, ಹೊಸ ವರ್ಷದ ಸಂದರ್ಭದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ.
ಸರಕಾರದ ಮಾರ್ಗಸೂಚಿ ಪ್ರಕಾರ ಈ ಆದೇಶ ಡಿಸೆಂಬರ್ 30, 31, ಜನವರಿ 1ಮತ್ತು 2ರಂದು ಅನ್ವಯವಾಗುವುದು. ಈ ದಿನಗಳಲ್ಲಿ ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಹೊಸ ವರ್ಷದ ಅಂಗವಾಗಿ ಯಾವುದೇ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿಯೂ ಹೊಸ ವರ್ಷ ಆಚರಣೆ ಅನುಮತಿ ನಿರಾಕರಿಸಲಾಗಿದೆ. ಪಟಾಕಿ ಸಿಡಿಸಿ ಸಂಭ್ರಮಿಸುವವರಿಗೆ ಹಸಿರು ಪಟಾಕಿ ಹಚ್ಚಲು ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧಾರಣೆ ಕಡ್ಡಾಯವಾಗಿದೆ.