ಇತ್ತೀಚಿನ ಸುದ್ದಿ
ಹೊಸ ತಳಿಯ ಕೊರೊನಾ ವೈರಸ್ : ಇಂಗ್ಲೆಂಡ್, ಸೌದಿಯಲ್ಲಿ ವಿಮಾನ ಹಾರಾಟ ರದ್ದು, ಲಾಕ್ ಡೌನ್
December 21, 2020, 6:25 PM

ಲಂಡನ್: ಹೊಸ ತಳಿಯ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಿಂದ ಯುರೋಪ್ ದೇಶಗಳಿಗೆ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದ್ದು, ಮತ್ತೆ ಲಾಕ್ ಡೌನ್ ಘೋಷಿಸಿದೆ. ಈ ಮಧ್ಯೆ ಸೌದಿ ಅರೇಬಿಯಾ ಒಂದು ವಾರಗಳ ಕಾಲ ವಿಮಾನ ಹಾರಾಟವನ್ನು ರದ್ದುಪಡಿಸಿ ಎಲ್ಲ ಗಡಿಗಳನ್ನು ಮುಚ್ಚಿವೆ.
ಹೊಸ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ನ ಹೊಸ ಮಾರ್ಗದರ್ಶಿ ಸೂತ್ರವನ್ನು
ಬ್ರಿಟಿಷ್ ಸರಕಾರ ಪ್ರಕಟಿಸಿದೆ.
ಹೊಸ ರೂಪದ ಕೊರೊನಾ ವೈರಸ್ ಹೆಚ್ಚು ಅಪಾಯಕಾರಿಯಾಗಿದ್ದು, ಶೇ. 70ರಷ್ಟು ಜನರಿಗೆ ಸೋಂಕು ಹರಡುವ ಭೀತಿಯಿದೆ. ಹೊಸ ಅಲೆಯ ಸೋಂಕಿನಿಂದ ಇಂಗ್ಲೆಂಡ್ ನಲ್ಲಿ ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿಯಾಗಿದೆ ಎಂದು ಇಂಗ್ಲೆಂಡ್ ನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ ಕಾಕ್ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಜನರು ಮನೆಯಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಐದು ದಿನಗಳ ಕ್ರಿಸ್ಮಸ್ ಬಬಲ್ ರದ್ದುಮಾಡಲಾಗಿದೆ.