ಇತ್ತೀಚಿನ ಸುದ್ದಿ
ಹೊಸ ಪ್ರಭೇದದ ಕೊರೊನಾ: ನೈಟ್ ಕರ್ಫ್ಯೂ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದೇನು ?
December 22, 2020, 2:27 PM

ಬೆಂಗಳೂರು(reporterkarnataka news):
ಹೊಸ ಪ್ರಭೇದದ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ರಾತ್ರಿ ಕರ್ಫ್ಯೂ ಅಗತ್ಯವಿಲ್ಲ . ಆದರೆ ಈ ಬಗ್ಗೆ ಜನರು ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂಗ್ಲೆಂಡ್ ನಿಂದ ಚೆನ್ನೈ ಹಾಗೂ ದೆಹಲಿಗೆ ಬಂದಿರುವ ಹಲವರಲ್ಲಿ ಕೊರೊನಾ ಹೊಸ ಪ್ರಹೇದ ಪತ್ತೆಯಾಗಿದೆ. ಹಾಗಾಗಿ ಎಷ್ಟೇ ಕಟ್ಟೆಚ್ಚರ ವಹಿಸಿದರೂ ಸಾಕಾಗುವುದಿಲ್ಲ. ಕೊರೊನಾ ಹೊಸ ರೂಪಾಂತರದ ಬಗ್ಗೆ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಧಾನಿ ಮೋದಿ ಕೂಡ ಎಚ್ಚರಿಕೆಯಿಂದಿರಲು ಸೂಚಿಸಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುವುದು ಎಂದು ನಗರದಲ್ಲಿ ಸುದ್ದಿಗಾರರು ಜತೆ ಮಾತನಾಡಿದ ಮುಖ್ಯಮಂತ್ರಿ ನುಡಿದರು.
ಕೊರೊನಾ ಕಾರಣದಿಂದ ಈ ವರ್ಷ ಹೊಸ ವರ್ಷದ ಸಂಭ್ರಮಾಚರಣೆ ಇಲ್ಲ. ಜನರು ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದರು.