5:48 AM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಹೂ ಬೇಕಾ.. ಹೂವು…!!! ನಗರದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಹೂ ವ್ಯಾಪಾರ ಜೋರು… ಹೊರ ಜಿಲ್ಲೆಯ ವ್ಯಾಪಾರಿಗಳೂ ಬಂದಿದ್ದಾರೆ

October 23, 2020, 1:24 PM

ಚಿತ್ರ : ಅನುಷ್ ಪಂಡಿತ್

ಮಂಗಳೂರು(reporterkarnataka): ನವರಾತ್ರಿ ಸಂದರ್ಭ ಮಂಗಳೂರಿನ ಮುಖ್ಯ ರಸ್ತೆಗಳ ಭಾಗದಲ್ಲಿ ಚೆಂಡು ಹೂವು ಹಾಗೂ ಸೇವಂತಿಗೆ ಹೂವುಗಳು ರಾರಾಜಿಸುವುದನ್ನು ಕಾಣಬಹುದು.

ಈ ಬಾರಿಯೂ ಉತ್ತರ ಕರ್ನಾಟಕದ ಅನೇಕ ಭಾಗಗಳಿಂದ ಹೂವಿನ ವ್ಯಾಪಾರಿಗಳು ಬಂದಿದ್ದು ನೆಹರು ಮೈದಾನದಿಂದ ಪುರಭವನದ ಪಕ್ಕದವರೆಗಿನ ಫುಟ್ ಪಾತ್ ಹಾಗೂ ಮಿನಿ ವಿಧಾನ ಸೌಧದ ಮುಂಭಾಗದ ಫುಟ್ ಪಾತ್‌ನಲ್ಲೂ ಹೂಗಳನ್ನು ಹರವಿ ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು.

ಕಳೆದ ಬಾರಿಗಿಂತ ವ್ಯಾಪಾರಿಗಳು ಸಂಖ್ಯೆ ತುಸು ಕಮ್ಮಿಯಾದರೂ ಜನರು ಆಯುಧ ಪೂಜೆ ಹಾಗೂ ವಾಹನಗಳಿಗೆ ಪೂಜೆ ಮಾಡುವ ಸಲುವಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಇಂದು ಬೆಳಗ್ಗಿನಿಂದಲೇ ಹೂವು ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಕಡೆಯ ವ್ಯಾಪಾರಿಗಳು ಮಂಗಳೂರು ದಸರಾ ಸಂದರ್ಭದಿಂದ ದೀಪಾವಳಿವರೆಗೂ ಇಲ್ಲಿ ವ್ಯಾಪಾರ ನಡೆಸುತ್ತಾರೆ. ಈ ಬಾರಿ ಚೆಂಡು ಹೂವಿನ ಗುಚ್ಚಕ್ಕೆ 500 ರೂಪಾಯಿ ಹಾಗೂ ಸೇವಂತಿಗೆಗೆ 1000 ರೂಪಾಯಿ ಬೆಲೆ ಇದೆ. ಊರಿನ ಹರವಿನ ವ್ಯಾಪಾರಿಗಳಿಗಿಂತ ತುಸು ಕಮ್ಮಿ ರೇಟಿನಲ್ಲಿ ನೀಡಲೂ ಇವರು ಒಪ್ಪಿಕೊಳ್ಳುವುದರಿಂದ ಸ್ಥಳೀಯರು ಇವರಿಂದ ಹೂವು ಖರೀದಿಸಲು ಹೆಚ್ಚು ಒಲವು ತೋರಿಸುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು