ಇತ್ತೀಚಿನ ಸುದ್ದಿ
ಹೈ ಟೆಕ್ ಹನಿ ಟ್ರ್ಯಾಪ್ ಜಾಲ ಬಯಲು: ಇದರ ಹಿಂದಿರುವವರು ಯಾರೆಂದು ತಿಳಿದರೆ ಬೆಚ್ಚಿ ಬೀಳುತ್ತೀರಾ !
January 5, 2021, 8:57 AM

ಬೆಂಗಳೂರು(reporterkarnataka news): ಹೈ ಟೆಕ್ ಹನಿ ಟ್ರ್ಯಾಪ್ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಪ್ರಮುಖ ಆರೋಪಿ ಶಿಕ್ಷಕಿ ಕವಿತಾಳನ್ನು ಬಂಧಿಸಲಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದ ಕವಿತಾ ಬಳಿಕ ಈ ಅಡ್ಡದಾರಿ ಹಿಡಿದಿದ್ದರು ಎಂದು ಆರೋಪಿಸಲಾಗಿದೆ.
ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಬಲಿಪಶುಗಳನ್ನು ಕವಿತಾ ಹುಡುಕುತ್ತಿದ್ದರು. ಎರಡನೆ ಮದುವೆಗೆ ಸಿದ್ದತೆ ನಡೆಸುತ್ತಿದ್ದವರನ್ನು ಟಾರ್ಗೆಟ್ ಮಾಡುತ್ತಿದ್ದಳು. ಬಳಿಕ ಸ್ನೇಹ ಸಂಪಾದಿಸಿ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಳು. ನಂತರ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ.